ರಾಯ್ಬರೇಲಿ ಜನತೆಗೆ ಸೋನಿಯಾ ಗಾಂಧಿ ಧನ್ಯವಾದ

Sonia Gandhi to visit Rae bareli

12-06-2019

ಲಖ್ನೋ: 2019ರ ಲೋಕಸಭೆ ಚುನಾವಣೆಯಲ್ಲಿ ರಾಯ್‍ಬರೇಲಿ ಕ್ಷೇತ್ರದಿಂದ ಜಯಗಳಿಸಿದ ನಂತರ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ತವರು ಕ್ಷೇತ್ರಕ್ಕೆ ಇಂದು ಭೇಟಿ ನೀಡಿದರು. ಈ ವೇಳೆ ಉತ್ತರಪ್ರದೇಶ ಪೂರ್ವದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಕೂಡ ಹಾಜರಿದ್ದರು.

ಸೋನಿಯಾ ಗಾಂಧಿಯವರು ರಾಯ್‍ಬರೇಲಿಯಿಂದ ಪುನರಾಯ್ಕೆಯಾದ ನಂತರ ಕ್ಷೇತ್ರದ ಜನತೆಗೆ ಧನ್ಯವಾದ ಅರ್ಪಿಸಿದರು. ಕಳೆದ ಲೋಕಸಭೆ ಚುನಾವಣೆಯಲ್ಲಿ 80 ಲೋಕಸಭೆ ಕ್ಷೇತ್ರಗಳಿರುವ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಕೇವಲ ರಾಯ್‍ಬರೇಲಿ ಕ್ಷೇತ್ರದಲ್ಲಿ ಮಾತ್ರ ಜಯಗಳಿಸಿದೆ. ಸೋನಿಯಾ ಪುತ್ರ ರಾಹುಲ್ ಗಾಂಧಿ ಅಮೇಥಿ ಕ್ಷೇತ್ರದಲ್ಲಿ ಸೋತು, ಕೇರಳದ ವೈನಾಡ್‍್ನಿಂದ ಲೋಕಸಭೆ ಪ್ರವೇಶಿಸಿದ್ದಾರೆ.

ಉತ್ತರಪ್ರದೇಶ ಭೇಟಿ ವೇಳೆ ಪಕ್ಷದ ಸ್ಥಿತಿಗತಿ ಮತ್ತು 2022ರ ವಿಧಾನಸಭೆ ಚುನಾವಣೆಗೆ ನಡೆಸಬೇಕಾದ ಕಾರ್ಯತಂತ್ರಗಳ ಕುರಿತು ರಾಜ್ಯದ ನಾಯಕರೊಂದಿಗೆ ಚರ್ಚಿಸಲಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Sonia Gandhi Congress AICC UttarPradesh


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ