ಪತ್ರಕರ್ತರ ಮೇಲೆ ಹಲ್ಲೆ: ಪೊಲೀಸ್ ಅಧಿಕಾರಿಗಳು ಅಮಾನತು

UP: GRP Officer Dismissed

12-06-2019

ಲಖ್ನೋ: ಉತ್ತರಪ್ರದೇಶದ ಶಾಮ್ಲಿಯಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ರೈಲ್ವೇ ಪೊಲೀಸ್ ಇಲಾಖೆಯ (ಜಿಆರ್‍ಪಿ) ಸ್ಟೇಷನ್ ಆಫೀಸರ್ ರಾಕೇಶ್ ಕುಮಾರ್, ಕಾನ್ಸ್ಟೇಬಲ್ ಸುನಿಲ್ ಕುಮಾರ್‍ರನ್ನು ಅಮಾನತು ಮಾಡಲಾಗಿದೆ.

ನಿನ್ನೆ ರಾತ್ರಿ ಧಿಮಾಪುರದ ಬಳಿ ಸರಕು ಸಾಗಣೆ ರೈಲು ಹಳಿ ತಪ್ಪಿದ ವೇಳೆ ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ಜಿಆರ್‍ಪಿ ಸಿಬ್ಬಂದಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಪತ್ರಕರ್ತ, ನನ್ನ ಮೇಲೆ ಹಲ್ಲೆ ನಡೆಸಿದ ಸಿಬ್ಬಂದಿ ಸಮವಸ್ತ್ರ ಧರಿಸಿರಲಿಲ್ಲ. ಒಬ್ಬ ನಮ್ಮ ಕ್ಯಾಮೆರಾವನ್ನು ಒಡೆದುಹಾಕಿದ, ಆಗ ನಾನು ಕೆಳಗೆ ಬಿದ್ದೆ. ನಾನು ಎದ್ದ ನಂತರ ಅವರು ನನ್ನನ್ನು ಹಿಡಿದು ಥಳಿಸಿದರು ಮತ್ತು ಬೈದರು. ನನ್ನನ್ನು ಬಂಧಿಸಿಟ್ಟು, ಬೆತ್ತಲಾಗಿಸಿದರು ಮತ್ತು ನನ್ನ ಬಾಯಿಯಲ್ಲಿ ಮೂತ್ರ ಮಾಡಿದರು ಎಂದು ಆರೋಪಿಸಿದ್ದರು.

ಪತ್ರಕರ್ತರ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜಿಆರ್‍ಪಿ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.


ಸಂಬಂಧಿತ ಟ್ಯಾಗ್ಗಳು

Lucknow Journalist Uttara Pradesh Police


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ