ಚೋಟಾ ಶಕೀಲ್ ನ ಸಹಚರನ ಬಂಧನ !

Kannada News

09-06-2017

ನವದೆಹಲಿ:- ದೆಹಲಿ ಪೊಲೀಸರ ವಿಶೇಷ ಪಡೆ ಕುಖ್ಯಾತ  ಗ್ಯಾಂಗ್ ಸ್ಟರ್ ಚೋಟಾ ಶಕೀಲ್ ನ ಸಹಚರನನ್ನು ಬಂಧಿಸಿದ್ದಾರೆ. ಮೂಲಗಳ ಪ್ರಕಾರ ಜುನೈಡ್ ಚೌದರಿ ಎಂಬಾತನನ್ನು ದೆಹಲಿಯ ಪೂರ್ವ ವಲಯದ ಪೊಲೀಸರು ನೆನ್ನೆ ರಾತ್ರಿ ಬಂಧಿಸಿದ್ದಾರೆ.  ಕಳೆದ ವರ್ಷ ಜೂನ್ ನಲ್ಲಿ  ಚೌದರಿಯನ್ನು ಇವನ ಮೂವರು ಸಹಚರರೊಂದಿಗೆ ಬಂಧಿಸಲಾಗಿತ್ತು, ಹವಾಲ ದಂಧೆ ಮತ್ತು ಹಿಂದು ಸಭಾ ಮುಖಂಡನ ಕೊಲೆಗೆ ಸಂಚು ರೂಪಿಸಿದ್ದು, ಇದನ್ನು ವಿಫಲಗೊಳಿಸಿದ ಪೊಲೀಸರು ಚೌದರಿಯನ್ನು ಬಂಧಿಸಿದ್ದರು, ಮೂರು ತಿಂಗಳ ಜೈಲು ವಾಸದಲ್ಲಿ ಇದ್ದ ಚೌದರಿ,, ಜಾಮೀನಿನ ಮೇಲೆ ಹೊರಗಡೆ ಬಂದಿದ್ದ, ಮತ್ತೆ ತನ್ನ ಹಳೇ ಚಾಳಿಯನ್ನೇ ಮುಂದುವರೆಸಿದ್ದರಿಂದ ಕೋರ್ಟ್ ನೀಡಿದ್ದ ಜಾಮೀನನ್ನು ನಿರಾಕರಿಸಿ ತಿಹಾರ್ ಜೈಲಿಗೆ ಕಳುಗಿಸಲಾಗಿತ್ತು, ತೀಹಾರ್ ಜೈಲಿ ನಿಂದಲೂ ಜಾಮೀನು ಪಡೆದು ಹೊರ ಬಂದ ಚೌಧರಿ ಮತ್ತೇ ಚೋಟಾ ಶಕೀಲ್ ನನ್ನು ಸಂಪರ್ಕಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದ, ಮತ್ತು ಹವಾಲ ದಂಧೆ ಸೇರಿದಂತೆ ಇನ್ನಿತರ ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದ, ಆದರೆ ಇದೀಗ ದೆಹಲಿ ಪೊಲೀಸರ ಬಂಧಿಯಾಗಿದ್ದಾನೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ