ಇಬ್ಬರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ

Suicide

11-06-2019

ಬೆಂಗಳೂರು, ಜೂ. 11-ಹೆಬ್ಬಾಳದ ಮನೋರಾಯನಪಾಳ್ಯದಲ್ಲಿ ಮಹಿಳೆಯೊಬ್ಬರು ತನ್ನ ಐದು ತಿಂಗಳ ಹೆಣ್ಣುಮಗು ಸೇರಿದಂತೆ, ಇಬ್ಬರು ಮಕ್ಕಳಿಗೆ ವಿಷ ಉಣಿಸಿ ಕೊಲೆಮಾಡಿ ತಾನೂ ನೇಣಿಗೆ ಶರಣಾಗಿದ್ದಾರೆ. ಪುಷ್ಪವತಿ (30) ತನ್ನ ಹೆಣ್ಣುಮಗು ಹಾಗೂ 8 ವರ್ಷದ ಜೀವನ್ ಎಂಬ ಮಗನಿಗೆ ವಿಷಹಾಕಿ ಕೊಂದು ನಂತರ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಗಳಾಗಿದ್ದಾರೆ.

ಎಂಬೆಸಿ ಗ್ರೂಪ್ ಕಂಪನಿಯಲ್ಲಿ ಕಾರು ಚಾಲಕನಾಗಿದ್ದ ನಾಗರಾಜ್‍ನನ್ನು 10 ವರ್ಷಗಳ ಹಿಂದೆ ಪುಷ್ಪವತಿ ಪ್ರೀತಿಸಿ ವಿವಾಹವಾಗಿದ್ದರು. ಕೌಟುಂಬಿಕ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ನಿನ್ನೆರಾತ್ರಿ 8.30ರ ವೇಳೆ ಪತಿ ಕೆಲಸಕ್ಕೆ ಹೋಗಿದ್ದಾಗ ಮೂರನೇ ತರಗತಿಗೆ ಹೋಗುತ್ತಿದ್ದ ಜೀವನ್ ಹಾಗೂ ಐದು ತಿಂಗಳ ಹೆಣ್ಣುಮಗುವಿಗೆ ವಿಷ ಹಾಕಿದ ಊಟ ತಿನ್ನಿಸಿ ಕೊಲೆಮಾಡಿ ನಂತರ, ಪುಷ್ಪವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆಗೂ ಮುನ್ನ ಜೀವನದಲ್ಲಿ ಜುಗುಪ್ಸೆಯಿಂದಾಗಿ ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ನನ್ನ ಸಾವಿಗೆ ನಾನೇ ಕಾರಣ ಎನ್ನುವ ಪತ್ರವನ್ನು ಪುಷ್ಪವತಿ ಬರೆದಿಟ್ಟಿದ್ದಾರೆ. ಪೊಲೀಸರು ಪರಿಶೀಲನೆ ಕೈಗೊಂಡಿರುವ ಬಗ್ಗೆ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Suicide Bengaluru Crime Mother


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ