ರೌಡಿ ಆಡುಗೋಡಿ ವಿಜಿ ಭೀಕರ ಕೊಲೆ

Adugodi Viji

11-06-2019

ಬೆಂಗಳೂರು: ಜೈಲಿನಿಂದ ಜಾಮೀನಿನ ಮೇಲೆ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿ ಬಂದಿದ್ದ ರೌಡಿ ಆಡುಗೋಡಿ ವಿಜಿ ಕೊಲೆ ಪ್ರಕರಣದ ಆರೋಪಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆಗೈದಿರುವ ಘಟನೆ ಕರ್ನಾಟಕ ಗಡಿ ಭಾಗದ ತಮಿಳುನಾಡಿನ ಬಾಗಲೂರು ಬಳಿ ನಡೆದಿದೆ.

ಬಿಟಿಎಂ ಲೇಔಟ್‍ನ ಮಹೇಶ್ ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ. ಆಡುಗೋಡಿವಿಜಿ ಕೊಲೆ ಕೃತ್ಯದಲ್ಲಿ ಜೈಲಿಗೆ ಹೋಗಿದ್ದ ಮಹೇಶ್ ಇತ್ತೀಚಿಗಷ್ಟೆ ಜಾಮೀನು ಪಡೆದು ಹೊರ ಬಂದಿದ್ದ.  ಹಳೇ ದ್ವೇಷದಿಂದ ಆತನನ್ನು ಕೊಲೆ ಮಾಡಲಾಗಿದೆ.

ಲಕ್ಕಸಂದ್ರ 16ನೇ ಅಡ್ಡರಸ್ತೆಯಲ್ಲಿ ರೌಡಿವಿಜಯ್ ಅಲಿಯಾಸ್ ವಿಜಿಯನ್ನು ಕಳೆದ ಡಿಸೆಂಬರ್‍ನಲ್ಲಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಆರೋಪಿಗಳಾಗಿದ್ದ ಮಹೇಶ್ ಸೇರಿದಂತೆ ಐದು ಜನರನ್ನು ಬಂಧಿಸಲಾಗಿತ್ತು. 15 ದಿನಗಳ ಹಿಂದಷ್ಟೇ ಮಹೇಶ್ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದ.

ಮಹೇಶ್ ಇರುವ ಜಾಗದ ಮಾಹಿತಿ ತಿಳಿದ ಕೊಲೆಯಾದ ವಿಜಿ ಸಹಚರರು ಸಂಚು ರೂಪಿಸಿ ಕೊಲೆಗೈದು ಬಳಿಕ ಶವವನ್ನು ತಮಿಳುನಾಡಿನ ಬಾಗಲೂರು ಬಳಿ ಎಸೆದಿದ್ದಾರೆ ಎಂದು ಕೇಳಿ ಬಂದಿದೆ. ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಪೊಲೀಸರು ಶೋಧ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Murder Adugodi Viji Crime Bail


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ