ಸಿಎಸ್ಒ ಮೇಲೆ ಮೋದಿ ಸರ್ಕಾರ ಒತ್ತಡ ಹೇರಿತ್ತು: ಸುಬ್ರಮಣಿಯನ್ ಸ್ವಾಮಿ

Subrahmaniyan Swamy statement

11-06-2019

ದೆಹಲಿ: ಕೇಂದ್ರೀಯ ಸಾಂಖ್ಯಿಕ ಸಂಸ್ಥೆ ಹಿರಿಯ ಅಧಿಕಾರಿಗಳ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಒತ್ತಡ ಹೇರಿದೆ ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದರು. ತ್ರೈಮಾಸಿಕ ಜಿಡಿಪಿ ಬೆಳವಣಿಗೆಯ ದತ್ತಾಂಶಗಳನ್ನು ನಂಬಬೇಡಿ, ಅವೆಲ್ಲ ಬೋಗಸ್. ಈ ವಿಷಯವನ್ನು ನಾನು ಏಕೆ ಹೇಳುತ್ತಿದ್ದೇನೆ ಎಂದರೆ, ಕೇಂದ್ರೀಯ ಸಾಂಖ್ಯಿಕ ಸಂಸ್ಥೆಯ ಸಂಸ್ಥಾಪಕರು ನನ್ನ ತಂದೆ ಎಂದು ಅವರು ಹೇಳಿದ್ದಾರೆ.

ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧದ ನಂತರ ಭಾರತದ ಆರ್ಥಿಕತೆ ಮತ್ತು ಜಿಡಿಪಿ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಎಂದು ಹೇಳಲು ಸಿಎಸ್‍ಒ ಮೇಲೆ ಒತ್ತಡ ಹಾಕಲಾಗಿತ್ತು ಎಂದು ಅವರು ಹೇಳಿದ್ದಾರೆ.

ನನಗೆ ಅಸ್ವಸ್ಥನಂತೆ ಭಾಸವಾಗುತ್ತಿದೆ. ನನ್ನ ಹೇಳಿಕೆಯ ಪರಿಣಾಮ ನನಗೆ ಗೊತ್ತು. ಆದ್ದರಿಂದ ನಾನು ಸಿಎಸ್‍ಒ ನಿರ್ದೇಶಕರನ್ನು, ನೀವು ಜಿಡಿಪಿಯನ್ನು ಹೇಗೆ ಲೆಕ್ಕ ಹಾಕುತ್ತೀರಿ. ನವೆಂಬರ್ 2016ರಲ್ಲಿ ನೋಟು ನಿಷೇಧಿಸಲಾಗಿತ್ತು. ಫೆಬ್ರವರಿ 1, 2017ರಂದು ಆರ್ಥಿಕ ಸಮೀಕ್ಷೆ ಪ್ರಕಟವಾಯಿತು. ಕನಿಷ್ಠ 3 ವಾರಗಳ ಮೊದಲೇ ಇದು ಮುದ್ರಣವಾಗಬೇಕು. ಹಾಗಾದಲ್ಲಿ ಜನವರಿ 2017ರಲ್ಲೇ ನೀವು ವರದಿಯನ್ನು ಸಲ್ಲಿದ್ದೀರಿ ಮತ್ತು ಯಾವುದೇ ಪರಿಣಾಮವಾಗಿಲ್ಲ ಎಂದು ಜಿಡಿಪಿಯನ್ನು ತೋರಿಸಿದ್ದೀರಿ. ಇದನ್ನು ನೀವು ಹೇಗೆ ಲೆಕ್ಕ ಹಾಕಿದಿರಿ? ಎಂದು ನಾನು ಪ್ರಶ್ನಿಸಿದೆ ಎಂದರು.

ಆಗ ಅವರು ಕಳೆದ ವರ್ಷದ ಅನೌಪಚಾರಿಕ ವಲಯ ಮತ್ತು ಔಪಚಾರಿಕ ಉತ್ಪಾದನೆಗಳ ಪ್ರಮಾಣವನ್ನು ಜನವರಿಯಲ್ಲಿ ಒಟ್ಟುಗೂಡಿಸಿ ಅನ್ವಯಿಸಲಾಯಿತು ಎಂದರು. ನಾನು ಆಗ ಅದರಲ್ಲಾದ ಬದಲಾವಣೆಯನ್ನು ಕುರಿತು ಹೇಳಿದೆ. ಆಗ ಅವರು, ನಾನು ಏನು ಮಾಡಲಿ? ನಾನು ಒತ್ತಡದಲ್ಲಿದ್ದೇನೆ. ನೀವು ಹೀಗೆ ದತ್ತಾಂಶ ನೀಡಿ ಎಂದರು ನಾನು ನೀಡಿದೆ ಎಂದರು. ಆದ್ದರಿಂದ ತ್ರೈಮಾಸಿಕ ಜಿಡಿಪಿ ಅಭಿವೃದ್ಧಿಯನ್ನು ನಂಬಬೇಡಿ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದರು.


ಸಂಬಂಧಿತ ಟ್ಯಾಗ್ಗಳು

Subrahmaniyan Swamy PM Modi CSO Government


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ