ಐಎಂಎ ದೋಖಾ-ಸಿಬಿಐ ತನಿಖೆಗೆ ಆಗ್ರಹ

IMA Jewels Cheating Case

11-06-2019

ಬೆಂಗಳೂರು: ಐಎಂಎ ಜ್ಯುವೆಲ್ಸ್ ಮಾಲೀಕ ನಾಪತ್ತೆ ಪ್ರಕರಣ ಸಂಬಂಧ ಇದರ ಹಿಂದೆ ಯಾರೇ ಭಾಗಿಯಾಗಿದ್ದರೂ ಸೂಕ್ತ ತನಿಖೆಯಾಗಲಿ. ದೊಡ್ಡ ರಾಜಕಾರಣಿಯಾಗಿದ್ದರೂ ಸಹ ಬಿಡಬಾರದು ಎಂದು ವಕ್ಫ್ ಸಚಿವ ಜಮೀರ್ ಅಹಮ್ಮದ್ ಖಾನ್ ಒತ್ತಾಯಿಸಿದ್ದಾರೆ.

ಹಗರಣ ಕುರಿತಂತೆ ಗೃಹ ಸಚಿವ ಎಂ.ಬಿ. ಪಾಟೀಲ್ ರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್‍ಅಹಮ್ಮದ್ , ಇದೊಂದು ಮಹಾ ವಂಚನೆ. ಈ ಬಗ್ಗೆ ಎಸ್‍ಐಟಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದೇವೆ. ಅಲ್ಲದೆ, ಐಎಎಸ್ ಹಾಗೂ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಬೇಕು. ಆನಂತರ ಸಿಬಿಐ ತನಿಖೆ ನಡೆಸಲಿ ಎಂದು ಮನವಿ ಮಾಡಿರುವುದಾಗಿ ಹೇಳಿದರು.

ಐಎಂಎ ಜ್ಯುವೆಲ್ಸ್ ಮಾಲೀಕ ಮಹಮ್ಮದ್ ಮನ್ಸೂರ್‍ಖಾನ್‍ಗೆ ಸೇರಿದ ಚಿನ್ನ, ಬೆಳ್ಳಿ, ವಜ್ರ ಇನ್ನಿತರ ಆಸ್ತಿಗಳನ್ನು ಸರ್ಕಾರ ಜಫ್ತಿ ಮಾಡಿ ಹೂಡಿಕೆ ಮಾಡಿರುವ ಅಮಾಯಕರಿಗೆ ಹಣ ನೀಡಲಿ ಎಂದು ಗೃಹ ಸಚಿವರಲ್ಲಿ ಮನವಿ ಮಾಡಿರುವುದಾಗಿ ಅವರು ತಿಳಿಸಿದರು.

 


ಸಂಬಂಧಿತ ಟ್ಯಾಗ್ಗಳು

IMA Jewels CBI Cheating Jameer Ahmad Khan


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ