ಐಎಂಎ ಜೆವೆಲ್ಸ್ ವಂಚನೆ: ಕಚೇರಿ ಎದುರು ಪ್ರತಿಭಟನೆ

IMA Jewels Cheating Case

11-06-2019

ಬೆಂಗಳೂರು: ಐಎಂಎ ಜೆವೆಲ್ಸ್‍ನ ಹೂಡಿಕೆದಾರರು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಹೂಡಿಕೆದಾರರು ಹಣ ಕೇಳಿದ ಕಾರಣಕ್ಕೆ ಸಂಸ್ಥೆಯ ಸಂಸ್ಥಾಪಕ ಮತ್ತು ಮಾಲೀಕ ಮನ್ಸೂರ್ ಖಾನ್, ಭ್ರಷ್ಟ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ಲಂಚ ಕೊಟ್ಟು ಸಾಕಾಗಿದ್ದೇನೆ ಎಂದು ಹೇಳಿಕೆ ನೀಡಿದ ಕಾರಣಕ್ಕೆ ಹೂಡಿಕೆದಾರರು ಪ್ರತಿಭಟನೆಗೆ ಮುಂದಾದರು.

ಈ ವೇಳೆ ಪ್ರತಿಕ್ರಿಯಿಸಿದ ಒಬ್ಬ ಹೂಡಿಕೆದಾರ, ನಾನು ಕಳೆದ ವರ್ಷ 25 ಲಕ್ಷ ರೂ. ಹೂಡಿಕೆ ಮಾಡಿದ್ದೆ ಮತ್ತು 9 ತಿಂಗಳ ನಂತರ ನನಗೆ ಹಣದ ಬಂದಿತ್ತು. ಆದರೆ, ಚುನಾವಣೆ ಸಮಯದಲ್ಲಿ ಹಣದ ಒಳಹರಿವು ಕಡಿಮೆಯಾಗಿದೆ ಎಂದು ಅವರು (ಐಎಂಎ ಜೆವೆಲ್ಸ್) ಹೇಳಿದರು. ಮತ್ತು 2 ತಿಂಗಳು ಕಾಯುವಂತೆ ಹೇಳಿದರು. 2 ದಿನಗಳ ಹಿಂದೆ ಮಾಲೀಕ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಸಂದೇಶ ಕಳುಹಿಸಿದ್ದಾರೆ ಎಂದರು.

ಪ್ರತಿಭಟನೆ ಸ್ಥಳದಲ್ಲಿ ಉದ್ವಿಘ್ನ ವಾತಾವರಣವನ್ನು ತಡೆಯಲು ಹೆಚ್ಚುವರಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಹೂಡಿಕೆದಾರರು ತಮ್ಮ ಹಣ ವಾಪಸ್ ಕೊಡಿ ಎಂದು ಐಎಂಎ ಜೆವೆಲ್ಸ್ ಮಾಲೀಕರ ಮೇಲೆ ಒತ್ತಡ ಹೇರುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Jewels Bengaluru Cheating Protest


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ