ಕಾರ್ನಾಡ್ ಸಾವಿಗೆ ಸಂಭ್ರಮ: ಸಿದ್ದರಾಮಯ್ಯ ಖಂಡನೆ

Siddaramaih Statement

11-06-2019

ಬೆಂಗಳೂರು: ಸಾವಿನ ಸಂಭ್ರಮ ಕೊಲೆಯಷ್ಟೆ ಘೋರ ಕೃತ್ಯ ಎನ್ನುವ ಮೂಲಕ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಸಾವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸಿದ ವಿಕೃತಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಅದು ಸಾವು, ಕಾರ್ನಾಡರದ್ದಾಗಲಿ, ಕಾಂಗ್ರೆಸಿಗನದ್ದಾಗಲಿ ಅಥವಾ ಬಿಜೆಪಿಯವರದ್ದಾಗಲಿ, ಸೈದ್ಧಾಂತಿಕವಿರೋಧಕ್ಕಾಗಿ ಯಾರೂ ಸಾವು ಸಂಭ್ರಮಿಸುವಂಥ ಶತ್ರುಗಳಾಗಬಾರದು ಎಂದು ಹೇಳಿದ್ದಾರೆ. 'ಬಿತ್ತಿದನ್ನೇ ಫಸಲಾಗಿ ಪಡೆಯುತ್ತೇವೆ'. ಹಾಗಾಗಿ ಬಿತ್ತುವುದಾದರೆ ಮಾನವೀಯತೆ ಮತ್ತು ಸೌಹಾರ್ದತೆಯನ್ನು ಬಿತ್ತೋಣ ಎಂದು ಅವರು ಸಲಹೆ ನೀಡಿದ್ದು, ಬಸವಣ್ಣನ ಭಾವಚಿತ್ರದಲ್ಲಿ ಬರಹ ಇರುವ ಫೋಟೋ ಒಂದನ್ನು ಕೂಡ ಹಂಚಿಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Girish Karnad Siddaramaih Author Tweet


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ