ಪಪ್ಪಾಯ ಬೀಜದ ಆಶ್ಚರ್ಯಕರ ಪ್ರಯೋಜನಗಳು

Surprising benefits of eating papaya seeds

11-06-2019

ಪಪ್ಪಾಯ ಹಣ್ಣ ಸಾಕಷ್ಟು ಆರೋಗ್ಯಕರ ಅಂಶಗಳನ್ನೊಳಗೊಂಡಿದೆ. ಇಡೀ ವರ್ಷ ಸಿಗುವ ಈ ಹಣ್ಣಿನಲ್ಲಿ ಸಾಕಷ್ಟು ಪೌಷ್ಠಿಕಾಂಶಗಳಿದ್ದು ಆರೋಗ್ಯಕ್ಕೆ ಒಳ್ಳೆಯದು. ಬರೀ ಪಪ್ಪಾಯ ಹಣ್ಣು ಮಾತ್ರವಲ್ಲ, ಈ ಹಣ್ಣುಗಳ ಬೀಜಗಳನ್ನು ತಿಂದರೂ ಕೂಡ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಆದರೆ ಸ್ವಲ್ಪ ಮಾತ್ರವೇ ತಿನ್ನಬೇಕು ಎನ್ನುವುದು ಕೆಲ ಆಹಾರ ತಜ್ಞರ ಅಭಿಪ್ರಾಯ.

ಔಷಧೀಯ ಗುಣಗಳನ್ನು ಹೊಂದಿರುವ ಪಪ್ಪಾಯ ಬೀಜಗಳನ್ನು ತಿಂದರೆ, ಸಾಮಾನ್ಯವಾಗಿ ಬರುವ ನೆಗಡಿ, ಕೆಮ್ಮು ಗುಣವಾಗುತ್ತವೆ.

ಸ್ಥೂಲಕಾಯ ನಿವಾರಿಸುವಲ್ಲಿ ಪಪ್ಪಾಯ ಬೀಜಗಳು ಸಹಕಾರಿ. ಇವು ಜೀರ್ಣಕ್ರಿಯೆಯನ್ನು ಸರಾಗವಾಗಿಸುತ್ತವೆ. ಅಲ್ಲದೇ ಹೃದಯದ ಆರೋಗ್ಯಕ್ಕೂ ಇದು ಒಳ್ಳೆಯದು.

ಕರುಳಿನ ಆರೋಗ್ಯಕ್ಕೂ ಒಳ್ಳೆಯದು.

ಋತುಚಕ್ರದ ವೇಳೆ ಬರುವ ಹೊಟ್ಟೆ ನೋವಿವನ್ನೂ ಕೂಡ ಪಪ್ಪಾಯ ಬೀಜಗಳು ಗುಣಪಡಿಸುತ್ತವೆ.

ದೇಹದಲ್ಲಿನ ಕೊಬ್ಬಿನ ಪ್ರಮಾಣವನ್ನು ಸಮನಾಗಿ ಕಾಯ್ದುಕೊಳ್ಳುವಲ್ಲಿ ಪಪ್ಪಾಯ ಬೀಜ ನೆರವಾಗುತ್ತದೆ.


ಸಂಬಂಧಿತ ಟ್ಯಾಗ್ಗಳು

Papaya Seeds Obesity Health Cholesterol


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ