ಪತ್ರಕರ್ತ ಪ್ರಶಾಂತ್ ಬಿಡುಗಡೆಗೆ ಸುಪ್ರೀಂ ಆದೇಶ

Supreme Court tells UP Government to release Journalist Prashanth

11-06-2019

ದೆಹಲಿ: ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ವಿರುದ್ಧ ಅವಹೇಳನಕಾರಿ ವಿಡಿಯೋವನ್ನು ಟ್ವೀಟರ್‍ನಲ್ಲಿ ಹಂಚಿದ ಆರೋಪದಡಿ ಬಂಧಿತ ಫ್ರೀಲ್ಯಾನ್ಸ್ ಪತ್ರಕರ್ತ ಪ್ರಶಾಂತ್ ಕನೋಜಿಯನ್ನು ತಕ್ಷಣ ಅವರನ್ನು ಬಿಡುಗಡೆ ಮಾಡಿ ಎಂದು ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿತು.

ಬಂಧನ ಕುರಿತ ಅರ್ಜಿಯ ವಿಚಾರಣೆ ವೇಳೆ ಅವರನ್ನು ಬಿಡುಗಡೆ ಮಾಡುವ ಉದಾರತೆ ತೋರಿ ಎಂದ ಸುಪ್ರೀಂ ಕೋರ್ಟ್, ಅಭಿಪ್ರಾಯಗಳಲ್ಲಿ ವ್ಯತ್ಯಾಸಗಳಿರುತ್ತವೆ. ಪ್ರಶಾಂತ್ ಅದನ್ನು ಪ್ರಾಯಶಃ ಪ್ರಸಾರ ಮಾಡಬಾರದಿತ್ತು ಅಥವಾ ಟ್ವೀಟ್‍ನಲ್ಲಿ ಬರೆಯಬಾರದಿತ್ತು. ಆದರೆ, ಯಾವ ಆಧಾರದಲ್ಲಿ ಆತನನ್ನು ಬಂಧಿಸಿದ್ದೀರಿ? ಎಂದು ಕೋರ್ಟ್ ಉತ್ತರಪ್ರದೇಶ ಸರ್ಕಾರವನ್ನು ಪ್ರಶ್ನಿಸಿತು. ಅಲ್ಲದೇ, ನಾಗರಿಕರ ಸ್ವಾತಂತ್ರ್ಯ ಪವಿತ್ರ ಮತ್ತು ಅಪರಿಮಿತ. ಇದಕ್ಕೆ ಸಂವಿಧಾನದ ಖಾತ್ರಿ ಇದೆ. ಇದನ್ನು ಯಾರೂ ಉಲ್ಲಂಘಿಸಬಾರದು ಎಂದು ಕೋರ್ಟ್ ಹೇಳಿತು.


ಸಂಬಂಧಿತ ಟ್ಯಾಗ್ಗಳು

Journalist Supreme Court Journalist Uttara Pradesh


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ