ಪಠ್ಯ ಪುಸ್ತಕದಲ್ಲಿ ರಾಷ್ಟ್ರಗೀತೆ ಅರ್ಧ ಮಾತ್ರ ಮುದ್ರಣ ?

Kannada News

09-06-2017

ಪಣಜಿ:-  ಗೋವಾದ ರಾಜ್ಯದ  ಎರಡನೆ ತರಗತಿಯ ಪಠ್ಯ ಪುಸ್ತಕದಲ್ಲಿ ರಾಷ್ಟ್ರಗೀತೆಯನ್ನು ಅರ್ಧ ಮಾತ್ರ ಮುದ್ರಿಸಲಾಗಿದೆ ಎಂದು ಕಾಂಗ್ರಸ್ ಪಕ್ಷ ಆರೋಪಿಸಿದೆ. ಗೋವಾದ ಎರಡನೆ ತರಗತಿಯ ಮರಾಠಿ ಪುಸ್ತವಾದ ಗೊಮಂತ್ ಭಾರತಿ ಎಂಬ  ಶೀರ್ಶಿಕೆಯ ಪುಸ್ತಕದಲ್ಲಿ ರಾಷ್ಟ್ರಗೀತೆಯನ್ನು ಆರ್ಧ ಮಾತ್ರ ಮದ್ರಿಸಲಾಗಿರುವ ಲೋಪ ಕಂಡು ಬಂದಿದೆ ಎಂದು ಗೋವಾದ ಕಾಂಗ್ರೆಸ್ ವಕ್ತಾರ ಹೇಳಿದ್ದಾರೆ. ಆದರೆ ಗೋವಾದ ಶಿಕ್ಷಣ ಇಲಾಖೆ ಈ ಆರೋಪವನ್ನು ತಳ್ಳಿಹಾಕಿದೆ. ಗೋವಾ ರಾಜ್ಯದ ಕಾಂಗ್ರೆಸ್ ನ ವಕ್ತಾರ ಸುನಿಲ್ ಕಾವತಾಂಕರ್ ಹೇಳುವಂತೆ ಗೋವಾ ಸರ್ಕಾರದಿಂದ ಈ ರೀತಿಯ ಕಾರ್ಯ, ದೊಡ್ಡ ಅಪರಾಧ, ಇದಕ್ಕೆ ಶಿಕ್ಷಣ ಇಲಾಖೆಯನ್ನು ಹೊಣೆಯನ್ನಾಗಿಸಬೇಕು ಎಂದಿದ್ದಾರೆ. ಅಲ್ಲದೆ ಬಿಜೆಪಿ ಪಕ್ಷವು, ನಮ್ಮದು ದೇಶ ಭಕ್ತಿಯ ಪಕ್ಷ ಎಂದು ಬಡಾಯಿ ಕೊಚ್ಚಿಕೊಳ್ಳುತ್ತದೆ, ಆದರೆ ಇಂತಹ ದೊಡ್ಡ ತಪ್ಪು ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಈ ವಿಚಾರವಾಗಿ ಗೋವಾ  ಸರ್ಕಾರ ತ್ವರಿತ ವಿಚಾರಣೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದು, ತಪ್ಪಿತಸ್ತರ ವಿರುದ್ಧ  ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ