ಕೈಲಾಸ ಮಾನಸ ಸರೋವರ ಯಾತ್ರೆಗೆ ಚಾಲನೆ

Kailasa Manasa Sarovara Yatra

11-06-2019

ದೆಹಲಿ: ಭಾರತೀಯರಿಗೆ ಪವಿತ್ರ ಯಾತ್ರಾ ಕ್ಷೇತ್ರವಾಗಿರುವ ಕೈಲಾಸ ಪರ್ವತ ಯಾತ್ರೆಗೆ ಚಾಲನೆ ಸಿಕ್ಕಿದೆ. ಭಾರತೀಯರು ಶತಮಾನಗಳಿಂದ ಶ್ರದ್ಧಾಭಕ್ತಿಗಳಿಂದ ನಡೆಸುತ್ತಿರುವ ಯಾತ್ರೆಗೆ ಚೀನಾ-ಭಾರತ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳಿಂದ ಕೆಲಕಾಲ ಅಡಚಣೆ ಎದುರಾಗಿತ್ತು. ಆದರೆ, ಎಲ್ಲ ಅಡೆತಡೆಗಳನ್ನು ಮೀರಿ ಇಂದು ಯಾತ್ರೆಗೆ ಚಾಲನೆ ನೀಡಲಾಯಿತು.

ಕೈಲಾಸ ಸರೋವರ ಯಾತ್ರೆಯ ಮೊದಲ ಯಾತ್ರಿಕರ ಗುಂಪಿಗೆ ಚಾಲನೆ ನೀಡಿ ಈ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಕೈಲಾಸ ಯಾತ್ರೆಯನ್ನು ಆಯೋಜಿಸಲು ಚೀನಾ ಸರ್ಕಾರ ನೀಡಿದ ಬೆಂಬಲಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಜೊತೆಗೆ, ಜನರ ಯಾತ್ರೆಗೆ ಅನುವು ಮಾಡಿಕೊಟ್ಟಿರುವುದು ಪ್ರಮುಖ ಹೆಜ್ಜೆ ಎಂದರು.


ಸಂಬಂಧಿತ ಟ್ಯಾಗ್ಗಳು

Manasa Sarovara Chaina Hindu India


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ