ಕಾಶ್ಮೀರದಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ

Two militants killed in Kashmir

11-06-2019

ಶ್ರೀನಗರದಲ್ಲಿ ಇಂದು ನಡೆದ ಎನ್‍ಕೌಂಟರ್‍ನಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಕಾಶ್ಮೀರ ಐಜಿಪಿ ಎಸ್‍ ಪಿ ಫಣಿ ಹೇಳಿದ್ದಾರೆ. ಹತ್ಯೆಯಾದ ಇಬ್ಬರೂ ಉಗ್ರರ ದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಇದೊಂದು ಉತ್ತಮ, ಸಮರ್ಥ ಕಾರ್ಯಾಚರಣೆ. ಕಾರ್ಯಾಚರಣೆ ವೇಳೆ ನೆರೆಹೊರೆಯಲ್ಲಿ ಯಾವುದೇ ಹಾನಿಯಾಗಿಲ್ಲ. ಅಂತಿಮ ಶೋಧಕಾರ್ಯ ಮುಕ್ತಾಯವಾಗಿದೆ. ಈ ವೇಳೆ ದೂರು ದಾಖಲಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ. ಇದಕ್ಕೂ ಮುನ್ನ ಕಾಶ್ಮೀರದ ಪೂಂಛ್‍ ಬಳಿಯ ಕೃಷ್ಣ ಘಾಟಿ ಬ್ರಿಗೇಡ್‍ನ ಹೆದ್ದಾರಿಯಲ್ಲಿ ಭಾರತೀಯ ಸೇನೆ ಸುಧಾರಿತ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಿದೆ.


ಸಂಬಂಧಿತ ಟ್ಯಾಗ್ಗಳು

Militants Firing Kashmir Encounter


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ