ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

Farmers protest in Kolar

10-06-2019

ಕೋಲಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಸ್ಥಾಪಿತ ರೈತ ಸಂಘ ಹಾಗೂ ಹರಿಸು ಸೇನೆ ಸಂಘಟನೆಯ ನೇತೃತ್ವದಲ್ಲಿ ರಾಷ್ಟ್ರಿಯ ಹೆದ್ದಾರಿ ಬಂದ್ ನಡೆಸುವ ಮೂಲಕ‌ ಪ್ರತಿಭಟನೆ ನಡೆಸಿದ್ರು .

ಕೋಲಾರ ರಾಷ್ಟೀಯ ಹೆದ್ದಾರಿ ಕೊಂಡರಾಜಹಳ್ಳಿ ಗೇಟ್ ಬಳಿ ರೈತ ಸಂಘಟನೆ ಹಾಗೂ ವಿವಿಧ ರೈತ ಪರ ಸಂಘಟನೆ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ರೈತರ ಒಪ್ಪಿಗೆ ಇಲ್ಲದೆ ಜಮೀನು ವಶಕ್ಕೆ ಪಡೆಯಬಾರದು ಸ್ವಾಧೀನಪಡಿಸಿಕೊಂಡ ಜಮೀನಿಗೆ, ನಾಲ್ಕು ಪಟ್ಟು ದರವನ್ನು ಪರಿಹಾರವನ್ನಾಗಿ ಕೊಡಬೇಕು ಹಾಗೂ ಜಮೀನು ಕಳೆದು ರೈತರಿಗೆ ಪುನರ್ವಸತಿ ಕಲ್ಪಿಸಬೇಕೆಂಬ ನಿಯಮ ಸಡಿಸಿಲಿ ಏಕಗಂಟಿನ ಪರಿಹಾರ ಯೋಜನೆ ಮುಂದಾಗಿರುವ ಸರ್ಕಾರಗಳ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಿದರು.

ಈ ಹೊಸ ಉದ್ದೇಶಿತ ತಿದ್ದುಪಡಿ ರೈತರ ಪಾಲಿಗೆ ಮರಣ ಶಾಸನವಾಗಲಿದೆ . ಇನ್ನು ಕಳೆದ ಫೆ 6ರಿಂದ 13 ರವರೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಯಾವುದೇ ಚರ್ಚೆ ಮಾಡದೆ ರೈತರ ಸಲಹೆ ಸೂಚನೆ ಪಡೆಯದೆ ಮಸೂದೆ ಅಂಗೀಕಾರ ಪಡೆದಿದೆ. ಸರ್ಕಾರದ ತಪ್ಪು ನಿರ್ಧಾರ ವಿರೋಧಿಸಬೇಕಿದ್ದ ವಿರೋಧ ಪಕ್ಷವೂ ಮುಖ್ಯಮಂತ್ರಿ ಗದ್ದುಗೆಗಾಗಿ ಬೇರೆ ಹೋರಾಟದಲ್ಲಿ ಮಗ್ನವಾಗಿದೆ. ಹೀಗಾದರೆ ಅನಕ್ಷರಸ್ತ ರೈತರು ಜೀವನ ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.

ಅಲ್ಲದೇ, ಭೂ ಸ್ವಾಧೀನ ತಿದ್ದುಪಡಿ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಬಾರದು ಎಂದು ಮನವಿ ಮಾಡಿದರು. ಈ ಮಧ್ಯೆ, ಹೋರಾಟಗಾರರನ್ನು ಬಲವಂತವಾಗಿ ವಶಕ್ಕೆ ಪಡೆದು ಪೊಲೀಸ್ ಜೀಪ್ ಗಳ‌ ಮೂಲಕ ಕರೆದೊಯ್ದರು.


ಸಂಬಂಧಿತ ಟ್ಯಾಗ್ಗಳು

Kolar Protest Farmers Agriculture


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ