ಬಿಜೆಪಿ ಕಾರ್ಯಕರ್ತರು 365 ದಿನವೂ ಜನರ ಕೆಲಸ ಮಾಡುತ್ತಾರೆ: ಮೋದಿ

PM Modi Statement

08-06-2019

ತಿರುವನಂತಪುರ: ಕೆಲವು ಪಂಡಿತರು ಕೇರಳದಲ್ಲಿ ಬಿಜೆಪಿ ಖಾತೆ ತೆರೆಯಲು ಸಾಧ್ಯವಿಲ್ಲ. ಆದರೂ ಮೋದಿ ಅಲ್ಲಿಗೇಕೆ ಹೋಗುತ್ತಾರೆ ಎಂದು ಆಲೋಚಿಸುತ್ತಾರೆ. ನಾನು ಜನತೆಗೆ ಧನ್ಯವಾದ ಹೇಳಲು ಆಗಮಿಸಿದ್ದೇನೆ. ಇದು ನಮ್ಮ ಸಂಸ್ಕೃತಿ, ನಮ್ಮ ಆಲೋಚನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಚುನಾವಣೆ ಸಮಯದಲ್ಲಿ ಎಲ್ಲರಿಗೂ ತಮ್ಮದೇ ಅವಕಾಶ ಇರುತ್ತದೆ. ಆದರೆ, ಚುನಾವಣೆಯ ನಂತರ 130 ಕೋಟಿ ನಾಗರಿಕರ ಜವಾಬ್ದಾರಿಯನ್ನು ನಿರ್ವಹಿಸುವುದು ಮುಖ್ಯ. ನಮ್ಮ ಗೆಲುವಿಗೆ ಕಾರಣರಾದವರು ನಮ್ಮವರು, ನಮ್ಮ ವಿರುದ್ಧ ಇದ್ದವರೂ ನಮ್ಮವರು. ಕೇರಳ ನನ್ನ ವಾರಾಣಸಿಯಂತೆ ಎಂದರು.

ಬಿಜೆಪಿಯ ತಳಮಟ್ಟದ ಕಾರ್ಯಕರ್ತರು ಕೇವಲ ಚುನಾವಣೆಗಾಗಿ ಕೆಲಸ ಮಾಡುವುದಿಲ್ಲ. ಅವರು 365 ದಿನವೂ ಜನರ ಕೆಲಸ ಮಾಡುತ್ತಾರೆ. ನಾವು ಕೇವಲ ಸರ್ಕಾರ ರಚಿಸಲು ರಾಜಕಾರಣಕ್ಕೆ ಬಂದಿಲ್ಲ. ನಾವು ದೇಶವನ್ನು ಕಟ್ಟಲು ಇಲ್ಲಿಗೆ ಬಂದಿದ್ದೇವೆ. ಜಗತ್ತಿನಲ್ಲಿ ಭಾರತಕ್ಕೆ ಯೋಗ್ಯ ಸ್ಥಾನ ಸಿಗುವುದನ್ನು ನೋಡಲು ತಪಸ್ಸಿಗಾಗಿ ಬಂದಿದ್ದೇವೆ ಎಂದರು.


ಸಂಬಂಧಿತ ಟ್ಯಾಗ್ಗಳು

BJP Kerala PM Modi Election


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ