ಕಾಂಗ್ರೆಸ್ ಅಶಿಸ್ತಿನ ವಿರುದ್ಧ ಧೃಡ ನಿಲುವು ತಾಳಬೇಕು: ಮೊಯ್ಲಿ

Veerappa Moily Statement

08-06-2019

ಬೆಂಗಳೂರು: ಜನ ದನಿ ಎತ್ತಿ ಮಾತನಾಡುತ್ತಿದ್ದಾರೆ. ಕೆಲವು ರಾಜ್ಯಗಳಲ್ಲಿ ಶಿಸ್ತು ಹಾಳಾಗಿದೆ. ಆದರೆ, ಪಕ್ಷ ಆರಾಮದ ಸ್ಥಿತಿಯಲ್ಲಿ ಇರಬಾರದು ಎಂದು ಮಾಜಿ ಸಂಸದ ಎಂ ವೀರಪ್ಪ ಮೊಯ್ಲಿ ಹೇಳಿದರು. ರಾಹುಲ್ ಗಾಂಧಿ ಇನ್ನೂ ಪಕ್ಷದ ಅಧ್ಯಕ್ಷರಾಗಿದ್ದಾರೆ ಮತ್ತು ಅವರು ಪಕ್ಷಕ್ಕೆ ರಾಜೀನಾಮೆ ನೀಡಬೇಕು. ಅಶಿಸ್ತನ್ನು ಧೃಡವಾಗಿ ನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಜೊತೆಗೆ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲು ಬಯಸಿದ್ದಾರೆ. ಪಕ್ಷವನ್ನು ಪುನರ್ರಚಿಸಿದ ನಂತರ ಅವರು ರಾಜೀನಾಮೆ ನೀಡಬೇಕು. ಪಕ್ಷ ಪುನರ್ರಚಿಸುವ ಸಾಮರ್ಥ್ಯ ಅವರಿಗಿದೆ. ಒಂದು ವೇಳೆ ಅವರು ಅಧಿಕಾರ ಹಸ್ತಾಂತರಿಸುವುದಾದರೆ ಸೂಕ್ತ ವ್ಯಕ್ತಿಗೆ ನೀಡಬೇಕು ಎಂದರು.


ಸಂಬಂಧಿತ ಟ್ಯಾಗ್ಗಳು

Veerappa Moily Rahul Gandhi Congress AICC


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ