ಮೋದಿ ದೇಶದ ಜನರನ್ನು ವಿಭಜಿಸುತ್ತಿದ್ದಾರೆ: ರಾಹುಲ್ ಗಾಂಧಿ

Rahul Gandhi Statement

08-06-2019

ತಿರುವನಂತಪುರ: ಕೇರಳದ ವೈನಾಡ್‍ನಿಂದ ಲೋಕಸಭೆ ಪ್ರವೇಶಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಕ್ಷೇತ್ರ ಕಾಲ್‍ಪೆಟ್ಟಾಗೆ ಭೇಟಿ ನೀಡಿದ್ದರು. ಈ ವೇಳೆ ಬೃಹತ್ ರೋಡ್ ಶೋ ನಡೆಸಿದ ನಂತರ ಜನರನ್ನು ಉದ್ದೇಶಿಸಿ ಮಾತನಾಡಿದರು.

ರಾಷ್ಟ್ರ ಮಟ್ಟದಲ್ಲಿ ವಿಷದ ವಿರುದ್ಧ ನಾವು ಹೋರಾಟ ನಡೆಸುತ್ತಿದ್ದೇವೆ. ನರೇಂದ್ರ ಮೋದಿಯವರು ವಿಷವನ್ನು ಬಳಸುತ್ತಾರೆ. ನಾನು ಬಳಸುತ್ತಿರುವ ಶಬ್ದ ಕಹಿ. ಆದರೆ, ಮೋದಿಯವರು ದ್ವೇಷವನ್ನು ಹರಡುವ ಮೂಲಕ ದೇಶವನ್ನು ಒಡೆಯಲು ವಿಷವನ್ನು ಬಳಸುತ್ತಿದ್ದಾರೆ ಎಂದು ರಾಹುಲ್ ಹೇಳಿದರು. ಅವರು ಕೋಪ ಮತ್ತು ದ್ವೇಷಗಳನ್ನು ಬಳಸಿಕೊಂಡು ಭಾರತದ ನಾಗರಿಕರನ್ನು ವಿಭಜಿಸುತ್ತಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಅವರು ಸುಳ್ಳುಗಳನ್ನು ಬಳಸಿಕೊಂಡರು. ಅವರು ದೇಶದ ಅತಿಕೆಟ್ಟ ಭಾವನಾತ್ಮಕತೆಯನ್ನು, ಕೋಪವನ್ನು, ಅಭದ್ರತೆಯನ್ನು ತಮ್ಮ ಸುಳ್ಳುಗಳನ್ನು ಪ್ರತಿನಿಧಿಸುತ್ತಾರೆ ಎಂದರು.

ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರೂ ನನ್ನ ಬಾಗಿಲು ಪ್ರತಿಯೊಬ್ಬರಿಗೂ ತೆರೆದಿದೆ ಎಂದ ಅವರು, ಯಾವುದೇ ಜಾತಿ, ಸಿದ್ಧಾಂತಗಳಿಗೆ ಸೇರಿದವರು, ಎಲ್ಲರಿಗೂ ಅವಕಾಶ ಇದೆ ಎಂದರು.


ಸಂಬಂಧಿತ ಟ್ಯಾಗ್ಗಳು

Rahul Gandhi Waynad Narendra Modi Loksabha


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ