ದ್ರೋಣ್ ಮೂಲಕ ರಕ್ತ ಸಾಗಣೆ

Drones to transport Blood

08-06-2019

ಡೆಹ್ರಾಡೂನ್: ಚಾಲಕ ರಹಿತ ವಾಹನ (ಯುಎವಿ)ಗಳು ಮಾನವನಿಗೆ ವರವಾಗಿ ಪರಿಣಮಿಸಿವೆ. ಅದರಲ್ಲೂ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ದ್ರೋಣ್‍ಗಳನ್ನು ಬಳಸಿಕೊಳ್ಳುತ್ತಿರುವುದರಿಂದ ಜೀವಹಾನಿ ತಪ್ಪುತ್ತಿದೆ.

ಉತ್ತರಾಖಂಡ್‍ನ ತೆಹ್ರಿ ಜಿಲ್ಲೆಯ ನಗರ ಪ್ರದೇಶದಿಂದ ದೂರ ಇರುವ ಪ್ರದೇಶಕ್ಕೆ ದ್ರೋಣ್ ಮೂಲಕ ರಕ್ತವನ್ನು ಸರಬರಾಜು ಮಾಡಲಾಗಿದೆ. ಭೌಗೋಳಿಕವಾಗಿ ತಕ್ಷಣ ತಲುಪಲು ಸಾಧ್ಯವಿಲ್ಲದ ಸ್ಥಳಕ್ಕೆ ದ್ರೋಣ್ ರಕ್ತವನ್ನು ತಲುಪಿಸಿದೆ.

ನಂದಗಾಂವ್ ಜಿಲ್ಲೆ ಆಸ್ಪತ್ರೆಗೆ 30 ಕಿಮೀ ದೂರದ ಬ್ಲಡ್ ಬ್ಯಾಂಕ್‍ನಿಂದ ರಕ್ತವನ್ನು ಪ್ರಾಯೋಗಿಕವಾಗಿ ಸರಬರಾಜು ಮಾಡಿದ್ದೇವೆ ಎಂದು ಹಿರಿಯ ವೈದ್ಯರಾದ ಸಾರಿಕ ಹೇಳಿದರು. 30 ಕಿಮೀ ಕ್ರಮಿಸಲು ದ್ರೋಣ್ ಕೇವಲ 18 ನಿಮಿಷ ಸಮಯವನ್ನು ತೆಗೆದುಕೊಂಡಿದೆಯಂತೆ. ಈ ಸಮಯದಲ್ಲಿ ಯಾವುದೇ ರೀತಿಯ ಅಡೆತಡೆಗಳು ಎದುರಾಗಿಲ್ಲ ಎಂಬ ಸಂಗತಿಯನ್ನೂ ಅವರು ಸಂತಸದಿಂದ ಹಂಚಿಕೊಂಡಿದ್ದಾರೆ. ಜೊತೆಗೆ, ಭವಿಷ್ಯದಲ್ಲಿ ದ್ರೋಣ್ ಸಾಮರ್ಥ್ಯವನ್ನು ಪರೀಕ್ಷಿಸಲು ಇನ್ನಷ್ಟು ಇಂತವೇ ಪ್ರಯತ್ನಗಳನ್ನು ಮಾಡುತ್ತೇವೆ ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Drone Hospital Blood Uttarakhand


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ