ಉಪನ್ಯಾಸಕರ ಸಂಘದ ಸದಸ್ಯರಿಂದ ಶಿಕ್ಷಣ ಇಲಾಖೆ ಮುಂದೆ ಪ್ರತಿಭಟನೆ !

Kannada News

08-06-2017 319

 ಬೆಂಗಳೂರು:-  ಕಾರ್ಯಾಭಾರದ ಕೊರತೆಯಿಂದ ಉಪನ್ಯಾಸಕರಿಗೆ ತಡೆಹಿಡಿದಿರುವ ವೇತನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಅವರ ನೇತೃತ್ವದಲ್ಲಿ ನಗರದ ಪದವಿಪೂರ್ವ ಶಿಕ್ಷಣ ಇಲಾಖೆ ಮುಂದೆ ಇಂದು ಪ್ರತಿಭಟನೆ ನಡೆಸಿದ ಉಪನ್ಯಾಸಕರು ಕೂಡಲೇ ಕಾರ್ಯಾಭಾರದ ಕೊರತೆಯಿಂದ 11 ವರ್ಷ ವೇತನ ತಡೆ ಹಿಡಿದಿರುವ ಮರಾಠಿ ಉಪನ್ಯಾಸಕ ರಮೇಶ್ ಅವರಿಗೆ ಕೂಡಲೇ ವೇತನವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರು. ಬೀದರ್ ಜಿಲ್ಲೆಯ ಜನತಾ ಪಿಯು ಕಾಲೇಜಿನ ಉಪನ್ಯಾಸಕ ರಮೇಶ್ 1991 ರಲ್ಲಿ ನೇಮಕಗೊಂಡು 2001ರಲ್ಲಿ ಅನುದಾನಕ್ಕೆ ಒಳಪಟ್ಟು ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 2006ರಲ್ಲಿ ವಿದ್ಯಾರ್ಥಿಗಳ ಸಂಖ್ಯಾಬಲವಿದ್ದರೂ, ಆಡಳಿತ ಮಂಡಳಿ ಮರಾಠಿ ವಿಷಯವನ್ನು ಮುಚ್ಚಿದ್ದರಿಂದ ಕಾರ್ಯಾಭಾರದ ಕೊರತೆ ಉಂಟಾಗಿ 11 ವರ್ಷಗಳ ಕಾಲ ವೇತನವಿಲ್ಲದೆ ಕಷ್ಟದ ಬದುಕು ಸಾಗಿಸಿದ್ದಾರೆ ಎಂದು ದೂರಿದರು. ವೇತನ ಬಿಡುಗಡೆಯಾಗದೆ ಸಂಕಷ್ಟಕ್ಕೆ ಸಿಲುಕಿರುವ ರಮೇಶ್ ಕುಟುಂಬ ಸದಸ್ಯರೊಂದಿಗೆ ಆತ್ಮಹತ್ಯೆಗೆ ಮುಂದಾಗುವುದಾಗಿ ತಿಳಿಸಿದ್ದಾರೆ. ಕೂಡಲೇ ಸರ್ಕಾರ ಗಮನಹರಿಸಿ ರಮೇಶ್ ಅವರ ವೇತನವನ್ನು ಬಿಡುಗಡೆ ಮಾಡಿ ಅವರ ನೆರವಿಗೆ ಧಾವಿಸುವಂತೆ ತಿಮ್ಮಯ್ಯ ಪುರ್ಲೆ ಒತ್ತಾಯಿಸಿದ್ದಾರೆ.

 




ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ