ಭಾರತದಲ್ಲಿ 2800 ಕೋಟಿ ಹೂಡಿಕೆ ಮಾಡಿದ ಅಮೆಜಾನ್

Amazon pumps in Rs 2,800 crore into India unit after its exit from China

08-06-2019

ಆನ್ ಲೈನ್ ದಿಗ್ಗಜ ಅಮೇಜಾನ್ ಅತಿದೊಡ್ಡ ಮಾರುಕಟ್ಟೆ ಹೊಂದಿರುವ ಭಾರತದಲ್ಲಿ ವಹಿವಾಟನ್ನು ವೃದ್ಧಿ ಪಡಿಸಲು ಚಿತ್ತ ಕೇಂದ್ರೀಕರಿಸಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಬರೋಬ್ಬರಿ 2800 ಕೋಟಿ ರೂ ಹೂಡಿಕೆ ಮಾಡಿದೆ.

ಅಮೆರಿಕ ಮೂಲದ ಅಮೆಜಾನ್ ಕಂಪನಿ ಚೀನಾದಲ್ಲಿ ತನ್ನ ವಹಿವಾಟನ್ನು ಸ್ಥಗಿತಗೊಳಿಸಿದ ಬಳಿಕ ಭಾರತದ ಮಾರುಕಟ್ಟೆಯತ್ತ ಹೆಚ್ಚಿನ ಒತ್ತು ನೀಡಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಅಮೆಜಾನ್ 2200 ಕೋಟಿ ಮೊತ್ತವನ್ನು ಭಾರತದಲ್ಲಿ ಹೂಡಿಕೆ ಮಾಡಿತ್ತು. ಇದೀಗ ಆ ಮೊತ್ತ 2800 ಕೋಟಿಗೆ ಏರಿಕೆಯಾಗಿದೆ.

ಇನ್ನು ವಾಲ್ ಮಾರ್ಟ್ ಭಾರತದ ಫ್ಲಿಪ್ ಕಾರ್ಟ್ ಅನ್ನು ಕೊಂಡುಕೊಂಡ ಬಳಿಕ ಭಾರತದ ಆನ್ ಲೈನ್ ರಿಟೇಲ್ ಮಾರುಕಟ್ಟೆಯಲ್ಲಿ ಅಮೆಜಾನ್ ಸಾಕಷ್ಟು ಸ್ಪರ್ಧೆ ಎದುರಿಸಿತ್ತು. ಅಲ್ಲದೇ ಭಾರತದ ಇ ಕಾಮರ್ಸ್ ನ ನಿಯಮಗಳಲ್ಲಿ ಬದಲಾವಣೆಯ ತಂದ ಬಳಿಕ ಅಮೆಜಾನ್ ವಹಿವಾಟಿನಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಿತ್ತು. ಆದರೆ ಆ ಬಳಿಕ ಕಂಪನಿ ಕೂಡ ತನ್ನ ತನ್ನ ನಿಯಮದಲ್ಲಿ ಬದಲಾವಣೆ ತಂದಿದೆ.


ಸಂಬಂಧಿತ ಟ್ಯಾಗ್ಗಳು

Amazon Investment Flipkart Company


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ