ಬ್ಯಾಟರಿ ಅಂಗಡಿಗೆ ಬೆಂಕಿ: ಅಪಾರ ಹಾನಿ

Fire in Battery shop

07-06-2019

ಜೂಮ್ ಕಾರ್ ಕಚೇರಿಯ ನೆಲಮಹಡಿಯಲ್ಲಿ ಶೇಖರಿಸಿದ್ದ ಹಳೆ ಬ್ಯಾಟರಿಗಳಿಗೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿರುವ ದುರ್ಘಟನೆ ದೊಮ್ಮಲೂರಿನ ಎರಡನೇ ಹಂತದ ಸರ್ವೀಸ್ ರಸ್ತೆಯಲ್ಲಿ ಗುರುವಾರ ರಾತ್ರಿ ನಡೆದಿದೆ

ನೂರಾರು ಬ್ಯಾಟರಿಗಳನ್ನು ನೆಲಮಹಡಿಯಲ್ಲಿ ಶೇಖರಿಸಿದ್ದು, ರಾತ್ರಿ 11ರ ವೇಳೆ ಬೆಂಕಿ ತಗುಲಿ ಬ್ಯಾಟರಿಗಳೆಲ್ಲಾ ಸುಟ್ಟುಹೋಗಿವೆ. ಸುದ್ದಿ ತಿಳಿದ ತಕ್ಷಣ ಎರಡು ಅಗ್ನಿಶಾಮಕ ವಾಹನಗಳು ಧಾವಿಸಿ ಬೆಂಕಿ ನಂದಿಸಿವೆ. ನೆಲಮಹಡಿಯಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹಲಸೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Fire Zoom Car Battery Police


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ