ವಿಚಾರವಾದಿಗಳ ಹತ್ಯೆ ಪ್ರಕರಣ: ಸ್ಫೋಟಕ ಮಾಹಿತಿ ಬಹಿರಂಗ

M M Kalaburgi Murder case

07-06-2019

ಬೆಂಗಳೂರು : ವಿಚಾರವಾದಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸ್ಫೋಟಕ ಮಾಹಿತಿಯೊಂದು ಇದೀಗ ಹೊರಬಿದ್ದಿದೆ. ದೇಶದ ನಾಲ್ಕು ಹೈಪ್ರೊಫೈಲ್ ಕೊಲೆ ಕೇಸ್‍ಗಳಿಗೆ ಬೈಕ್ ನೀಡಿರುವುದು ಒಬ್ಬನೇ ಎನ್ನುವ ಅಂಶ ಎಸ್‍ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕಲಬುರ್ಗಿ ಹತ್ಯೆ ಸಂಬಂಧ ವಾಸುದೇವ್ ಎಂಬ ಆರೋಪಿಯನ್ನ ಎಸ್‍ಐಟಿ ಬಂಧಿಸಿದ್ದಾರೆ. ಆರೋಪಿ ವಾಸುದೇವ್ ತನಿಖಾಧಿಕಾರಿಗಳ ಎದುರು ಪನ್ಸಾರೆ, ದಾಬೋಲ್ಕರ್, ಕಲಬುರ್ಗಿ ಹಾಗೂ ಗೌರಿ ಹತ್ಯೆ ಪ್ರಕರಣಗಳಿಗೆ ಬೈಕ್ ಸಪ್ಲೈ ಮಾಡಿರುವ ವಿಚಾರವನ್ನ ಬಾಯ್ಬಿಟ್ಟಿದ್ದಾನೆ.

ಗೌರಿ ಹಾಗೂ ಕಲಬುರ್ಗಿ ಹತ್ಯೆಯ ಪ್ರಮುಖ ಆರೋಪಿ ಅಮೂಲ್ ಕಾಳೆ ಸೂಚನೆಯಂತೆ ತಾನು ಗೆ ಬೈಕ್ ನೀಡಿದ್ದೆನು ಎಂದು ಎಸ್ಐಟಿ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಉನ್ನತ ಮೂಲಗಳು ತಿಳಿಸಿವೆ.

ವಾಸುದೇವ್ ಭಗವಾನ್ ಸೂರ್ಯವಂಶಿ ಮಹಾರಾಷ್ಟ್ರ ಮೂಲದವನಾಗಿದ್ದು ಮಹಾರಾಷ್ಟ್ರದಲ್ಲೇ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸ್ತಿದ್ದ. ಸದ್ಯ ಕಲಬುರ್ಗಿ ಕೊಲೆ ಪ್ರಕರಣದ ವಿಚಾರವಾಗಿ ಎಸ್‍ಐಟಿ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

M M Kalaburgi Murder Police case Murder Gowri Lankesh


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ