ಅಪಾಯಕಾರಿ ವೀಲ್ಹಿಂಗ್ : ಇಬ್ಬರ ಬಂಧನ

Wheeling

07-06-2019

ಬೆಂಗಳೂರು : ಅಪಾಯಕಾರಿ ವೀಲ್ಹಿಂಗ್ ನಡೆಸುತ್ತಿದ್ದ ಯುವಕನೊಬ್ಬನನ್ನು ಬಂಧಿಸಿ ಅಪ್ರಾಪ್ತ ಬಾಲಕನೊಬ್ಬನನ್ನು ಯಲಹಂಕ ಸಂಚಾರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ವೀಲ್ಹಿಂಗ್ ಮಾಡುತ್ತಿದ್ದ ಆರ್.ಟಿ. ನಗರದ ಸಾಹಿಲ್ ರಹಮಾನ್ (19)ನನ್ನು ಬಂಧಿಸಿ, ಮತ್ತೊಬ್ಬ 16 ವರ್ಷದ ಅಪ್ರಾಪ್ತ ಬಾಲಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ಸಾರಾ ಫಾತಿಮಾ ತಿಳಿಸಿದ್ದಾರೆ.

ಕಳೆದ ಜೂನ್ 2 ರಂದು ಮುಂಜಾನೆ ಹೆಬ್ಬಾಳ ಮೇಲುಸೇತುವೆ ರಸ್ತೆಯಿಂದ ಯಲಹಂಕದವರೆಗೆ ಈ ಇಬ್ಬರೂ ಅಪಾಯಕಾರಿ ವೀಲ್ಹಿಂಗ್ ನಡೆಸಿಕೊಂಡು ಹೋಗುತ್ತಿದ್ದರು. ಹಿಂದೆ ಹೋಗುತ್ತಿದ್ದ ಬೈಕ್ ಸವಾರರೊಬ್ಬರು ಅದನ್ನು ಸೆರೆಹಿಡಿದು ಯಲಹಂಕ ಸಂಚಾರ ಪೊಲೀಸರಿಗೆ ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ದೃಶ್ಯದಲ್ಲಿನ ದ್ವಿಚಕ್ರ ವಾಹನದ ಸಂಖ್ಯೆಯನ್ನು ಆಧರಿಸಿ ಇವರಿಬ್ಬರನ್ನು ಬಂಧಿಸಿ, ಕ್ರಮ ಕೈಗೊಳ್ಳಲಾಗಿದೆ

ಸ್ನೇಹಿತೆಯ ಜೊತೆ ವೀಲ್ಹಿಂಗ್

ದೇವನಹಳ್ಳಿ ಮುಖ್ಯರಸ್ತೆಯಲ್ಲಿ ಸ್ಕೂಟರ್‍ನ ಹಿಂಬದಿಯಲ್ಲಿ ಸ್ನೇಹಿತೆಯನ್ನು ಕೂರಿಸಿಕೊಂಡು ಅಪಾಯಕಾರಿ ವೀಲ್ಹಿಂಗ್ ನಡೆಸಿದ ಯುವಕನಿಗಾಗಿ ಪೆÇಲೀಸರು ತೀವ್ರ ಶೋಧ ನಡೆಸಿದ್ದಾರೆ.

ಡಿಯೋ ಸ್ಕೂಟರ್‍ನ ಹಿಂದೆ ಯುವತಿಯನ್ನು ಕೂರಿಸಿಕೊಂಡು ಒಂದು ಕಾಲನ್ನು ಸೀಟಿನ ಮೇಲಿಟ್ಟು ಮತ್ತೊಂದು ಕಾಲನ್ನು ಎತ್ತಿ ನಿಯಂತ್ರಣ ಸಾಧಿಸಿ ಅಪಾಯಕಾರಿ ವೀಲ್ಹಿಂಗ್ ಅನ್ನು ಯುವಕನೊಬ್ಬ ನಡೆಸಿದ್ದಾನೆ.

ದೇವನಹಳ್ಳಿಯ ಮುಖ್ಯರಸ್ತೆಯಲ್ಲಿ ನಡೆಸಿದ ವೀಲ್ಹಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಲ್ಹಿಂಗ್ ಮಾಡಿರುವ ದೃಶ್ಯವನ್ನು ಸೋನು ಎಂಬ ಯುವತಿ ಹಲೋ ಎಂಬ ಆಪ್‍ನಲ್ಲಿ ಹರಿಬಿಟ್ಟಿದ್ದು, ಕೆಲದಿನಗಳ ಹಿಂದೆ ಈ ವೀಲ್ಹಿಂಗ್ ನಡೆದಿದ್ದು, ಡಿಯೋ ಸ್ಕೂಟರ್‍ನ ಸಂಖ್ಯೆ ಆಧರಿಸಿ ಯುವಕನ ಬಂಧನಕ್ಕೆ ದೇವನಹಳ್ಳಿ ಸಂಚಾರ ಹಾಗೂ ವಿಶ್ವನಾಥಪುರ ಪೊಲೀಸರು ತೀವ್ರಶೋಧ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Wheeling Police Arrest Devanahalli


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ