ಮಕ್ಕಳಿಗೆ ಅಶ್ಲೀಲ ಫೋಟೋ ತೋರಿಸುವ ರೌಡಿ ಶಿಕ್ಷಕ !

Kannada News

08-06-2017

ತುಮಕೂರು:- ಶಿಕ್ಷಕರು ಎಂದರೆ ದೇವರು ಸಮಾನ ಎಂದು ಎಲ್ಲರೂ ಭಾವಿಸ್ತಾರೆ. ಆದರೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಲಂಕೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಶಿಕ್ಷಕ ಮಾತ್ರ ಇದಕ್ಕೆ ತದ್ವಿರುದ್ಧವಾಗಿದ್ದಾನೆ. ಶಾಲೆಯಲ್ಲಿ ಓದುವ ಹೆಣ್ಣು ಮಕ್ಕಳಿಗೆ ಮೊಬೈಲ್‍ ನಲ್ಲಿ ಅಶ್ಲೀಲ ಫೋಟೋ ತೋರಿಸೋ ಕೆಲಸ ಮಾಡುತ್ತಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿವೆ. ದೇವರಾಜು ಎಂಬಾತನ ವಿರುದ್ಧ ಈ ಆರೋಪಗಳು ಕೇಳಿ ಬಂದಿವೆ. ದೇವರಾಜು ಶಾಲೆಗೆ ತನಗೆ ಬೇಕಾದ ಸಮಯಕ್ಕೆ ಬಂದು ಪಾಠವೂ ಮಾಡದೇ ಮೊಬೈಲ್ ಹಿಡಿದುಕೊಂಡು ಕೂರ್ತಾರೆ. ಮೊಬೈಲ್‍ನಲ್ಲಿ ಬೇಸರವಾದಾಗ ಶಾಲೆಯಲ್ಲೇ ನಿದ್ದೆಗೆ ಜಾರುತ್ತಾನೆ. ಈ ಕುರಿತು ಯಾರಾದ್ರೂ ಶಿಕ್ಷಕರು ಅಥವಾ ಪೊಷಕರು ಪ್ರಶ್ನೆ ಮಾಡಿದರೆ ಅವರ ಮೇಲೆಯೇ ಗೂಂಡಾ ವರ್ತನೆ ತೋರಿಸುತ್ತಾನೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಈ ದೇವರಾಜು ಹೆಸರಿನಲ್ಲಿ ಈಗಾಗಲೇ ಅನೇಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ತುಮಕೂರು ನಗರ ಡಿವೈಎಸ್ಪಿ ಶಿಕ್ಷಕ ದೇವರಾಜುನನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಿದ್ದಾರೆ. ಇಷ್ಟೆಲ್ಲಾ ಇದ್ದರೂ ಸಹ ಶಿಕ್ಷಣ ಇಲಾಖೆ ಇತನನ್ನು ಶಿಕ್ಷಕನಾಗಿ ಮುಂದುವರೆಸುತ್ತಿರುವುದು ಈತನ ಪ್ರಭಾವವನ್ನು ತೋರಿಸುತ್ತದೆ. ಶಿಕ್ಷಕ ದೇವರಾಜು ಕಾಟಕ್ಕೆ ಬೇಸತ್ತಿರುವ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಈತನನ್ನು ಕೂಡಲೇ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ