ಸೋರುತಿಹುದು ಮೆಜೆಸ್ಟಿಕ್ ಮೆಟ್ರೊ ನಿಲ್ದಾಣ!

Mejestic Metro Station

06-06-2019

ಬೆಂಗಳೂರು : ನಗರದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮೆಜಿಸ್ಟಿಕ್‍ನ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ಸೋರಿಕೆಯಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.

ನಗರದ ಅತಿದೊಡ್ಡ ಮೆಟ್ರೋ ರೈಲು ನಿಲ್ದಾಣ ಮೆಜಿಸ್ಟಿಕ್‍ನ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ಸೋರಿಕೆಯಾಗುತ್ತಿರುವುದು ಕಳಪೆ ಕಾಮಗಾರಿ ನಡೆದಿರುವುದಕ್ಕೆ ಸಾಕ್ಷಿಯಾಗಿದೆ.

ಕೆಲ ತಿಂಗಳ ಹಿಂದೆ ಎಂ.ಜಿ. ರಸ್ತೆಯ ಟ್ರಿನಿಟಿ ನಿಲ್ದಾಣದ ಬಳಿ ಮೆಟ್ರೋ ಫಿಲ್ಲರ್ ಒಂದರಲ್ಲಿ ಬಿರುಕು ಕಾಣಿಸಿಕೊಂಡು ಸಾಕಷ್ಟು ಆತಂಕ ಸೃಷ್ಟಿಸಿತು. ಇದರ ಬೆನ್ನಲ್ಲೇ ಮೆಜಿಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ನೀರು ಸೋರುತ್ತಿದೆ.

ಕಳೆದ ರಾತ್ರಿ ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆ ಸುರಿದಿದೆ. ಮೆಟ್ರೋ ನಿಲ್ದಾಣದ ಟಿಕೆಟ್ ಕೌಂಟರ್ ಸಮೀಪ ನೀರು ಸೋರುತ್ತಿದೆ. ನೀರು ಸಂಗ್ರಹಿಸಲು ಮೆಟ್ರೋ ರೈಲು ನಿಲ್ದಾಣ ಸಿಬ್ಬಂದಿ ಬಕೇಟು ಇಟ್ಟಿದ್ದಾರೆ. ಇದೂವರೆಗೆ ಸುರಂಗ ಮಾರ್ಗದ ಕೆಲ ಭಾಗಗಳಲ್ಲಿ ಸೋರುತ್ತಿದ್ದ ಮಳೆ ನೀರು ಟೆಕೆಟ್ ಪಡೆಯುವ ಕೌಂಟರ್ ಬಳಿಗೂ ವಿಸ್ತರಣೆಯಾಗಿದೆ

ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಮೆಟ್ರೋ ನಿಲ್ದಾಣ ಮಾಡಿ ಈಗ ಮಳೆ ನೀರು ಸೋರಿಕೆ ಯಾಗುತ್ತಿರುವುದಕ್ಕೆ ಕಳಪೆ ಕಾಮಗಾರಿ ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Mejestic Rain Metro Station Train


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ