ಸ್ಮಾರ್ಟ್ ಕಾರ್ಡ್ ಮಾದರಿಯ ವಿದ್ಯಾರ್ಥಿ ಪಾಸ್ ವಿತರಣೆ

BMTC Smart Card

06-06-2019

ಪ್ರಸಕ್ತ 2018-19ನೇ ಸಾಲಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆಸಂಸ್ಥೆ (ಬಿಎಂಟಿಸಿ)ಯು ಆನ್‍ಲೈನ್ ಮೂಲಕ 3.35 ಲಕ್ಷ ಸ್ಮಾರ್ಟ್‍ಕಾರ್ಡ್ ಮಾದರಿಯ ವಿದ್ಯಾರ್ಥಿ ಪಾಸ್‍ಗಳನ್ನು ವಿತರಿಸಿದೆ.

ಸ್ಮಾರ್ಟ್‍ಕಾರ್ಡ್ ಮಾದರಿಯ ವಿದ್ಯಾರ್ಥಿ ಪಾಸ್‍ಗಳನ್ನು ಆನ್‍ಲೈನ್ ಮೂಲಕ ವಿತರಿಸಿರುವ ಮೊಟ್ಟ ಮೊದಲ ಸಾರಿಗೆ ಸಂಸ್ಥೆಯಾಗಿದೆ. ಆನ್‍ಲೈನ್ ಮೂಲಕ ಸ್ಮಾರ್ಟ್‍ಕಾರ್ಡ್‍ಗಳನ್ನು ಪಡೆಯಲು ವಿದ್ಯಾರ್ಥಿಗಳು ವೆಬ್‍ಸೈಟ್ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ.

ಯಾವುದೇ ರೀತಿಯ ದಾಖಲಾತಿಗಳನ್ನು ಸಲ್ಲಿಸುವ ಅಥವಾ ಪರಿಶೀಲಿಸುವ ಅವಶ್ಯಕತೆ ಇಲ್ಲ. ಕಳೆದ ಬಾರಿ ವಿತರಿಸಲಾದ ಸ್ಮಾರ್ಟ್‍ಕಾರ್ಡ್ ವಿದ್ಯಾರ್ಥಿ ಪಾಸ್‍ಗಳ ಮಾನ್ಯತೆಯನ್ನು 2018-19ನೇ ಸಾಲಿನಲ್ಲಿ ವಿತರಿಸಲಾದ ಸ್ಮಾರ್ಟ್‍ಕಾರ್ಡ್ ವಿದ್ಯಾರ್ಥಿ ಪಾಸ್‍ಗಳ ಮಾನ್ಯತೆಯನ್ನು ಈ ಸಾಲಿಗೂ ವಿಸ್ತರಿಸಿ ನವೀಕರಿಸಲಿದೆ.ಶೈಕ್ಷಣಿಕ ಸಂಸ್ಥೆಗಳು ಅರ್ಜಿಗಳನ್ನು ಆನ್‍ಲೈನ್ ಮೂಲಕವೇ ಪರಿಶೀಲಿಸಿ ಅನುಮೋದನೆ ನೀಡಬಹುದಾಗಿದೆ.


ಸಂಬಂಧಿತ ಟ್ಯಾಗ್ಗಳು

BMTC Student Smart Card Online


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ