ವಿದೇಶ ಪ್ರವಾಸ ಹೆಸರಲ್ಲಿ ವಂಚನೆ: 6 ಮಂದಿ ವಿರುದ್ಧ ಪ್ರಕರಣ

 Cheating case

06-06-2019

ಬೆಂಗಳೂರು: ಲಕ್ಕಿಡಿಪ್‍ನಲ್ಲಿ ಮೊಬೈಲ್ ಸಂಖ್ಯೆಗೆ ಬಹುಮಾನ ಬಂದಿದ್ದು, ಟೂರ್ ಪ್ಯಾಕೇಜ್ ನಲ್ಲಿ ವಿದೇಶಕ್ಕೆ ಪ್ರವಾಸ ಕಳುಹಿಸುವುದಾಗಿ ಹೇಳಿ ವಂಚಿಸಿದ 6 ಮಂದಿ ವಿರುದ್ಧ ಬಸವೇಶ್ವರನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಂಚನೆಗೊಳಗಾದ ಗೋವಿಂದರಾಜನಗರದ ವಿನೀತ್ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಹರ್ಷ, ಮೊಹಮದ್, ಅಕ್ಮಲ್ ಸೇರಿ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ 2018ರ ಮಾರ್ಚ್‍ನಲ್ಲಿ ವಿನೀತ್ ಮೊಬೈಲ್‍ಗೆ ಅಪರಿಚಿತ ನಂಬರ್‍ನಿಂದ ಪದೇಪದೆ ಕರೆಗಳು ಬರುತ್ತಿದ್ದವು.ಕರೆ ಸ್ವೀಕರಿಸಿದಾಗ ಬಸವೇಶ್ವರನಗರದ ಕಂಟ್ರಿ ಕ್ಲಬ್‍ನಿಂದ ಮಾತನಾಡುತ್ತಿದ್ದು, ನಿಮ್ಮ ಮೊಬೈಲ್ ನಂಬರ್‍ಗೆ ಲಕ್ಕಿಡಿಪ್‍ನಲ್ಲಿ ಬಹುಮಾನ ಬಂದಿದೆ. ದಂಪತಿ ಸಮೇತ ನಮ್ಮ ಕಂಟ್ರಿಕ್ಲಬ್‍ಗೆ ಬನ್ನಿ ಎಂದು ಮಹಿಳೆಯೊಬ್ಬರು ಸೂಚಿಸಿದ್ದರು. ಖುಷಿಯಾದ ವಿನೀತ್ ತಮ್ಮ ಪತ್ನಿ ಜತೆ 2018ರ ಮಾ.5ರಂದು ಬಸವೇಶ್ವರನಗರ ಕಂಟ್ರಿಕ್ಲಬ್‍ಗೆ ಹೋಗಿದ್ದರು.

ಅಲ್ಲಿ ಹರ್ಷ ಎಂಬಾತ ದಂಪತಿಯನ್ನು ಪರಿಚಯಿಸಿಕೊಂಡು ಟೂರ್ ಪ್ಯಾಕೇಜ್ ಮೂಲಕ ಪ್ರಪಂಚದ ಯಾವುದೇ ಪ್ರದೇಶಕ್ಕೆ ಪ್ರವಾಸ ಹೋಗಬಹುದು. ಊಟದ ಬಿಲ್ ಮಾತ್ರ ನೀವು ಪಾವತಿಸಿದರೆ ಸಾಕು, ಉಳಿದ ವ್ಯವಸ್ಥೆಯನ್ನು ನಾವೇ ಮಾಡುತ್ತೇವೆ ಎಂದು ಹೇಳಿದ್ದನು. ಇವರ ಮಾತನ್ನು ನಂಬಿದ ವಿನೀತ್ 60 ಸಾವಿರ ರೂ.ಗಳನ್ನು ನೀಡಿದ್ದರು.ಇದಾದ ನಂತರ ಕ್ಲಬ್‍ನ ಸಿಬ್ಬಂದಿ ಪ್ರವಾಸಕ್ಕೆ ಕರೆದುಕೊಂಡು ಹೋಗದೆ, ಹಣವನ್ನೂ ಹಿಂದಿರುಗಿಸದೆ ವಂಚಿಸಿದ್ದಾರೆ ಎಂದು ವಿನೀತ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Foreign Trip Police Lucky draw Cheating


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ