ರೆಪೋ ದರ ಇಳಿಸಿದ ಆರ್ ಬಿ ಐ

RBI Cuts Repo rate by 25 bps

06-06-2019

ದೆಹಲಿ: ರೆಪೋ ದರವನ್ನು 25ರಷ್ಟು ಬೇಸಿಸ್ ಪಾಯಿಂಟ್ ಕಡಿತಗೊಳಿಸಿ ಶೇ.5.75ಕ್ಕೆ ಇಳಿಸುವ ಮಹತ್ವದ ನಿರ್ಧಾರವನ್ನು ಆರ್ ಬಿ ಐ ತೆಗೆದುಕೊಂಡಿದೆ. 2019ರಲ್ಲಿ ದರ ಇಳಿಸುವ ಮೂಲಕ ಸತತ ಮೂರನೇ ಬಾರಿ ರೆಪೋ ದರ ಕಡಿತಗೊಳಿಸಿದಂತಾಗಿದೆ. ಈ ಹಿಂದಿನ ದರವನ್ನು ಆರ್ ಬಿ ಐ ಶೇ.6ಕ್ಕೆ ನಿಗದಿಪಡಿಸಿತ್ತು. ಇಂದಿನ ಬದಲಾವಣೆಯ ಪರಿಣಾಮದಿಂದಾಗಿ ಇದರ ದರ ಶೇ. 5.75 ಆಗಿದೆ.

ಇದರೊಂದಿಗೆ ರಿವರ್ಸ್ ರೆಪೋ ದರ ಮತ್ತು ಬ್ಯಾಂಕ್ ದರ ಕ್ರಮವಾಗಿ 5.50 ಮತ್ತು ಮತ್ತು 6.0 ಆಗಿದೆ. ಇದರೊಂದಿಗೆ ಜಿಡಿಪಿ ಅಂದಾಜು ಬೆಳವಣಿಗೆಯನ್ನು ಇಳಿಸಲಾಗಿದ್ದು, ಈ ಹಿಂದಿನ ಗುರಿಯಾಗಿದ್ದ ಶೇ. 7.2ರ ಬದಲಿಗೆ ಶೇ. 7ಕ್ಕೆ ಸೀಮಿತಗೊಳಿಸಲಾಗಿದೆ. ಹಣದುಬ್ಬರ ಪ್ರಮಾಣ 2019-20ರ ಮೊದಲ ಅರ್ಧದಲ್ಲಿ ಶೇ. 3 ಮತ್ತು ದ್ವಿತೀಯ ಅರ್ಧದಲ್ಲಿ ಶೇ. 3.4 ರಿಂದ ಶೇ. 3.7 ಇರಲಿದೆ ಎಂದು ಆರ್‍ ಬಿ ಐ ಹೇಳಿದೆ.


ಸಂಬಂಧಿತ ಟ್ಯಾಗ್ಗಳು

RBI Loan Repo rate Bank


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ