ಡಿಕೆಶಿ ಕಾಂಗ್ರೆಸ್ ನ ನೂತನ ಸಾರಥಿ?

DKS likely to be next KPCC President?

06-06-2019

ಲೋಕಸಭಾ ಚುನಾವಣೆಯ ಹೀನಾಯ ಸೋಲು, ಹಿರಿಯ ನಾಯಕರ ಬಂಡಾಯದಿಂದ ತತ್ತರಿಸಿರುವ ಕಾಂಗ್ರೆಸ್ ಹೈಕಮಾಂಡ್, ಇದೀಗ ನಾಯಕತ್ವ ಬದಲಾವಣೆಗೆ ಚಿಂತನೆ ಆರಂಭಿಸಿದೆ. ಪ್ರಸಕ್ತ ಸನ್ನಿವೇಶದಲ್ಲಿ ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಂಡು ಪಕ್ಷವನ್ನು ಸಂಘಟಿಸುವ ಸಾಮರ್ಥ್ಯ ಹೊಂದಿರುವ ನಾಯಕರಿಗಾಗಿ ಹೈಕಮಾಂಡ್ ಹುಡುಕಾಟ ಆರಂಭಿಸಿದೆ.

ದಿನೇಶ್ ಗುಂಡೂರಾವ್ ವಿರುದ್ಧ ಯಾವುದೇ ಆಪಾದನೆಗಳಿಲ್ಲ. ಆದರೆ ಪಕ್ಷ ಸಂಘಟನೆಯ ಜವಾಬ್ದಾರಿ ನಿಭಾಯಿಸಲು ಸಾಧ್ಯವಾಗಲಿಲ್ಲ. ಅದರಲ್ಲೂ ಹಿರಿಯ ನಾಯಕರ ವಿಶ್ವಾಸ ಗಿಟ್ಟಿಸುವಲ್ಲಿ ವಿಫಲವಾದರು ಎಂಬ ಆರೋಪ ಕೇಳಿಬಂದಿದೆ.

ಪ್ರಸ್ತುತ ಸ್ಥಿತಿಯಲ್ಲಿ ಈ ಜವಾಬ್ದಾರಿ ನಿಭಾಯಿಸಲು ಡಿ.ಕೆ ಶಿವಕುಮಾರ್ ಸೂಕ್ತ ಅನ್ನೋದು ಹೈ ಕಮಾಂಡ್ ನಂಬಿಕೆಯಾಗಿದೆ. ಆದರೆ ಅವರ ವಿರುದ್ಧ ಇರುವ ಐ.ಟಿ ಮತ್ತು ಇಡಿ ಪ್ರಕರಣಗಳು ನಾಯಕತ್ವವನ್ನು ಚಿಂತೆಗೀಡುಮಾಡಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ನೇರವಾಗಿ ಡಿ.ಕೆ ಶಿ ಬಳಿ ಮಾತನಾಡಿದೆ. ಈ ಮೂಲಕ ಪರೋಕ್ಷವಾಗಿ ವಿಷಯ ಡಿಕೆಶಿ ಕಿವಿಗೆ ತಲುಪಿಸುವ ಪ್ರಯತ್ನ ನಡೆದಿದೆ, ಅದರೆ ಶಿವಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಲು ಸಮಯವಕಾಶ ಕೋರಿದ್ದಾರೆಂದು ಗೊತ್ತಾಗಿದೆ.


ಸಂಬಂಧಿತ ಟ್ಯಾಗ್ಗಳು

Government Congress DKS KPCC


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ