ಮಳೆಗಾಗಿ ಪರ್ಜನ್ಯ ಹೋಮ, ಡಿಕೆಶಿಯಿಂದ ಪೂಜೆ

Pooja for Rain

06-06-2019

ಪ್ರಸಕ್ತ ಮುಂಗಾರು ವಾಡಿಕೆಯ ಮಳೆ ಸುರಿಸಲಿದೆ ಎಂದು ಹವಾಮಾನ ತಜ್ಞರು ಭವಿಷ್ಯ ನುಡಿದಿದ್ದಾರೆ. ಆದರೆ ಮುಂಗಾರು ಪೂರ್ವ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಹಿನ್ನೆಲೆಯಲ್ಲಿ ಆತಂಕ ಉಂಟಾಗಿದೆ.

ಮುಂಗಾರು ಕೂಡ ಉತ್ತಮ ಮಳೆ ‌ತರದೆ ಹೋದರೆ ಎಂಬ ಆತಂಕ ರೈತಾಪಿ ವರ್ಗವನ್ನು ಕಾಡುತ್ತಿದೆ. ಸತತವಾದ ಬರಗಾಲದ ತೆಕ್ಕೆಗೆ ಸಿಲುಕಿದ ರೈತಾಪಿ ಸಮುದಾಯ ಈ ಬಾರಿಯಾದರೂ ಸಂತಸದಿಂದ ಇರಬೇಕೆಂದು ಬಯಸುತ್ತಿರುವ ಸರ್ಕಾರ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ಆದೇಶಿಸಿದೆ.

ಇದರ ಬೆನ್ನಲ್ಲೇ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಮಲೆನಾಡಿನ ತಪ್ಪಲಿನಲ್ಲಿರುವ ಋಷ್ಯಶೃಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಬುಧವಾರ ಕುಟುಂಬ ಸದಸ್ಯರೊಂದಿಗೆ ಶೃಂಗೇರಿಗೆ ಆಗಮಿಸಿದ್ದ ಅವರು ಗುರುವಾರ ಕಿಗ್ಗಾಕ್ಕೆ ತೆರಳಿದರು. ಕಿಗ್ಗಾದಲ್ಲಿ ಬೆಳಿಗ್ಗೆಯಿಂದಲೆ ಪರ್ಜನ್ಯ ಹೋಮ, ಹವನ, ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮುಜರಾಯಿ ಸಚಿವ ಪರಮೇಶ್ವರ ನಾಯಕ್, ಶಾಸಕ ಟಿ.ಡಿ.ರಾಜೇಗೌಡ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.


ಸಂಬಂಧಿತ ಟ್ಯಾಗ್ಗಳು

DK Shivkumar Farmers Rain Farmers


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ