ತಂದೆ ಬುದ್ಧಿವಾದ ಹೇಳಿದ್ದಕ್ಕೆ ನೇಣಿಗೆ ಶರಣಾದ ಮಗ

Suicide

04-06-2019

ಬೆಂಗಳೂರು : ಯಾವಾಗಲೂ ಮೊಬೈಲ್‍ನಿಂದ ದೂರ ಇರುವಂತೆ ಹೇಳುತ್ತಿದ್ದ ತಂದೆಯ ಬುದ್ಧಿವಾದದಿಂದ ಬೇಸತ್ತು 15 ವರ್ಷದ ಮಗನೊಬ್ಬ ನೇಣಿಗೆ ಶರಣಾಗಿರುವ ದುರ್ಘಟನೆ ಮಾರತ್‍ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ನಡೆದಿದೆ.

ಕಾಡಬಿಸನಹಳ್ಳಿಯ ಪಣತ್ತೂರಿನ ಸೆಕ್ಯುರಿಟಿ ಗಾರ್ಡ್ ಹರಸಿಂಗ್ ಭಟ್ ಅವರ ಪುತ್ರ ಗೋಪಾಲ್ ಸಿಂಗ್ ಭಟ್ ಎಂದು ಆತ್ಮಹತ್ಯೆ ಮಾಡಿಕೊಂಡವರನ್ನು ಗುರುತಿಸಲಾಗಿದೆ.ಸೋಮವಾರ ಮಧ್ಯಾಹ್ನ ರೂಮಿಗೆ ಒಳಗಿನಿಂದ ಚಿಲಕ ಭದ್ರಪಡಿಸಿಕೊಂಡು ಗೋಪಾಲ್ ಸಿಂಗ್ ಭಟ್ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

8ನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ ಗೋಪಾಲ್ ಸಿಂಗ್ ಭಟ್ ಯಾವಾಗಲೂ ಮೊಬೈಲ್ ಹಿಡಿದು ಕುಳಿತುಕೊಳ್ಳುತ್ತಿದ್ದ. ಇದನ್ನು ಕಂಡು ತಂದೆ ಹರಸಿಂಗ್ ಭಟ್ ಸಾಕಷ್ಟು ಬಾರಿ ಬುದ್ಧಿವಾದ ಹೇಳಿದ್ದರೂ, ಆತನ ವರ್ತನೆ ಸರಿಹೋಗಿರಲಿಲ್ಲ.ಬೆಳಿಗ್ಗೆ ಕೂಡ ಮೊಬೈಲ್ ನೋಡುತ್ತ ಕುಳಿತಿದ್ದ ಗೋಪಾಲ್ ಸಿಂಗ್ ಭಟ್‍ಗೆ ತಂದೆ ಬೈದು ಕೆಲಸಕ್ಕೆ ಹೋಗಿದ್ದಾರೆ.

ಮಧ್ಯಾಹ್ನ ತಂದೆಯ ಬುದ್ಧಿವಾದದಿಂದ ನೊಂದಿದ್ದ ಆತ, ತಾಯಿ ಹೊರಗಡೆ ಹೋಗಿದ್ದಾಗ ರೂಮಿಗೆ ಒಳಗಿನಿಂದ ಚಿಲಕ ಹಾಕಿಕೊಂಡು ನೇಣಿಗೆ ಶರಣಾಗಿದ್ದಾನೆ.ಪ್ರಕರಣ ದಾಖಲಿಸಿರುವ ಮಾರತ್‍ಹಳ್ಳಿ ಪೆÇಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Hanging Student Suicide Police


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ