ಪೇದೆ ಲಂಚ ಪಡೆದಿದ್ದೆ ಇಬ್ಬರ ಸಾವಿಗೆ ಕಾರಣವಾಯ್ತು..!

Ranam Movie

04-06-2019

ಬೆಂಗಳೂರು : ಚಿತ್ರೀಕರಣಕ್ಕೆ ಅನುಮತಿ ಇಲ್ಲದಿದ್ದರೂ 5 ಸಾವಿರ ಲಂಚ ಪಡೆದು ಪೊಲೀಸ್ ಪೇದೆಯೊಬ್ಬ ಚಿತ್ರೀಕರಣ ನಡೆಯಲು ಅವಕಾಶ ಮಾಡಿಕೊಟ್ಟಿದ್ದರಿಂದ ನಟ ಚಿರಂಜೀವಿ ಸರ್ಜಾ ಅಭಿನಯದ `ರಣಂ' ಸಿನೆಮಾದ ಚಿತ್ರೀಕರಣ ನಡೆದು ಇಬ್ಬರು ಅಮಾಯಕರು ಮೃತಪಟ್ಟಿರುವುದಕ್ಕೆ ಕಾರಣವಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಚಿತ್ರೀಕರಣ ನಡೆಸಲು ಎಸಿಪಿ ಕಚೇರಿಯಿಂದ ಅವಕಾಶ ನೀಡದಿದರೂ 5 ಸಾವಿರ ಲಂಚ ಪಡೆದು ಚಿತ್ರೀಕರಣ ನಡೆಯಲು ಪೇದೆ ಭೀಮಾ ಶಂಕರ್ ವ್ಯವಸ್ಥೆ ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿದ್ದರಿಂದ ಅಮಾನತು ಮಾಡಿ ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ಆದೇಶ ಹೊರಡಿಸಿದ್ದಾರೆ.

ಕಳೆದ ಮಾರ್ಚ್ ತಿಂಗಳ 29ರಂದು ಬಾಗಲೂರಿನ ಶೆಲ್ ಕಂಪನಿ ಬಳಿ `ರಣಂ' ಸಿನಿಮಾ ಚಿತ್ರೀಕರಣದ ವೇಳೆ ಸಿಲಿಂಡರ್ ಸ್ಫೋಟಗೊಂಡು ಸಮೀರಾ ಬಾನು (28) ಹಾಗೂ ಆಕೆಯ ಮಗಳು ಆಯೇಶಾ ಮೃತಪಟ್ಟಿದ್ದರು. ಪ್ರಕರಣದ ತನಿಖೆ ವೇಳೆ ಪೆÇಲೀಸರಲ್ಲೇ ಆಂತರಿಕ ವೈಫಲ್ಯದ ಅನುಮಾನ ಮೂಡಿದ್ದರಿಂದ ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ಆಂತರಿಕ ತನಿಖೆ ನಡೆಸುವಂತೆ ಸೂಚಿಸಿದ್ದರು.


ಸಂಬಂಧಿತ ಟ್ಯಾಗ್ಗಳು

Ranam Shooting Movie Police


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ