ಮ್ಯಾನ್ ಹೋಲ್ ಬಗ್ಗೆ ಅರಿವು ಮೂಡಿಸಲು ಸಾಕ್ಷ್ಯಚಿತ್ರ !

Kannada News

08-06-2017

 

ಬೆಂಗಳೂರು- ಮೈಸೂರಿನಲ್ಲಿ ಮ್ಯಾನ್‍ಹೋಲ್‍ನಲ್ಲಿ ಪೌರಕಾರ್ಮಿಕರನ್ನು ಇಳಿಸಿದ ಪ್ರಕರಣ ಸಂಬಂಧ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಘಟನೆಯನ್ನು ನಾನು ಖಂಡಿಸುತ್ತೇನೆ. ಜೀವನೋಪಾಯಕ್ಕಾಗಿ ನಮ್ಮವರು ಇಂತ ಕೆಲಸ ಮಾಡುತ್ತಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ಕಾರ್ಮಿಕರು ಈ ಬಗ್ಗೆ ಜಾಗೃತರಾಗಬೇಕು. ಬೇರೆಯವರು ಕೂಡ ಈ ಕೆಲಸ ಮಾಡುತ್ತಿದ್ದಾರೆ. ಆಂಧ್ರದಿಂದ ಬಂದ ಕೆಲವರು ಈ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಇಂತ ಘಟನೆಗಳು ನಡೆಯುತ್ತಿವೆ. ಮ್ಯಾನ್‍ಹೋಲಿನೊಳಗೆ ಪೌರಕಾರ್ಮಿಕರು ಇಳಿಯಬಾರದೆಂಬ ನಿಯಮ ಇದ್ದರೂ ಪಾಲನೆ ಆಗುತ್ತಿಲ್ಲ. ಪೌರಕಾರ್ಮಿಕರನ್ನು ಇಳಿಸುವರೂ ಕೂಡಾ ಈ ಸಂಬಂಧ ಅರಿವು ಇಟ್ಟುಕೊಳ್ಳಬೇಕು. ಮೈಸೂರಿನ ಪ್ರಕರಣದ ಬಗ್ಗೆ ಜಿಲ್ಲಾಡಳಿತಕ್ಕೆ ತನಿಖೆಗೆ ಸೂಚನೆ ನೀಡಲಾಗಿದೆ ಎಂದರು. ನಮ್ಮ ಇಲಾಖೆಯಿಂದ ಒಂದು ಸಾಕ್ಷ್ಯಚಿತ್ರ ನಿರ್ಮಿಸಿ ಪೌರಕಾರ್ಮಿಕರಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಿದ್ದೇವೆ. ಪೌರಕಾರ್ಮಿಕರು ಮ್ಯಾನ್‍ಹೋಲ್‍ನೊಳಗೆ ಇಳಿದರೆ ಎಂಥ ಅಪಾಯ ಆಗುತ್ತದೆ ಎಂದು ಬಿಂಬಿಸುವ ಸಾಕ್ಷ್ಯಚಿತ್ರ ಇದಾಗಿದೆ. ಈ ಸಾಕ್ಷ್ಯಚಿತ್ರದಲ್ಲಿ ಮ್ಯಾನ್‍ಹೋಲ್‍ನೊಳಗೆ ವಿಷ ಇರುವ ಬಗ್ಗೆ, ಇಳಿದರೆ ಪ್ರಾಣಾಪಾಯ ಆಗುವ ಕುರಿತು ಹೇಳಲಾಗುತ್ತದೆ. ಮ್ಯಾನ್ ಹೋಲ್‍ನೊಳಗಿಳಿದು ಪ್ರಾಣ ಕಳೆದುಕೊಂಡ ಪೌರಕಾರ್ಮಿಕರ ದುರಂತಗಳ ಬಗ್ಗೆಯೂ ಮಾಹಿತಿ ಇರಲಿದೆ ಎಂದು ಸಚಿವ ಆಂಜನೇಯ ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ