ರಂಜಾನ್ ಹಿನ್ನೆಲೆ : ಬೆಂಗಳೂರಿನಲ್ಲಿ ಪ್ರಮುಖ ಮಾರ್ಗ ಬದಲಾವಣೆ

Ramzan

04-06-2019

ಬೆಂಗಳೂರು : ಮುಸ್ಲಿಂರ ಪವಿತ್ರ ರಂಜಾನ್ ಹಬ್ಬದ ಹಿನ್ನಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದ್ದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲಾಗಿದೆ

ಮುಂಜಾಗೃತ ಕ್ರಮವಾಗಿ ನಗರದ ಸೂಕ್ಷ್ಮ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದ್ದು ಹಬ್ಬದ ಪ್ರಾರ್ಥನೆಯ ಹಿನ್ನಲೆಯಲ್ಲಿ ಸಂಚಾರ ವ್ಯವಸ್ಥೆಗಳನ್ನು ಕೆಲ ಬದಲಾವಣೆಗಳನ್ನು ಮಾಡಲಾಗಿದೆ.

ಕೆ.ಜಿ ಹಳ್ಳಿಯ ಉಮರ್ ಬಿನ್ ಮಸೀದಿಯ ಬಳಿಯ ನಾಗಾವಾರ ಮುಖ್ಯರಸ್ತೆಯಲ್ಲಿ ಪ್ರಾರ್ಥನ ಕೂಟ ನಡೆಯುವುದರಿಂದ ನಾಗಾವಾರದಿಂದ ನರೇಂದ್ರ ಟೆಂಟ್, ಪೆರಿಯಾರ್ ನಗರದ ಕಡೆಗೆ ಬರುವ ವಾಹನಗಳನ್ನು ಹೊರ ರಿಂಗ್ ರಸ್ತೆಯಲ್ಲಿಯೇ ನಿರ್ಬಂಧಿಸಿ ಹೆಣ್ಣೂರು ಜಂಕ್ಷನ್ ಕಡೆಗೆ ಮಾರ್ಗ ಬದಲಾವಣೆ ಮಾಡಿ ಲಿಂಗರಾಜಪುರ ಆಯಿಲ್ ಮಿಲ್ ಮುಖಾಂತರ ಮುಂದೆ ಸಾಗಬಹುದಾಗಿರುತ್ತದೆ

ಗೋವಿಂದಪುರದಿಂದ ನರೇಂದ್ರ ಟೆಂಟ್ ಕಡೆಗೆ ಬರುವ ವಾಹನಗಳನ್ನು ನರೇಂದ್ರ ಟೆಂಟ್ ಬಳಿ ಸಂಚಾರವನ್ನು ನಿರ್ಬಂಧಿಸಿ ಎಡ ತಿರುವು ಪಡೆದುಕೊಂಡು ಬಿ.ಡಿ.ಎ. ಕಾಂಪ್ಲೆಕ್ಸ್, ಸಿದ್ದಪ್ಪ ರೆಡ್ಡಿ ಸರ್ಕಲ್ ಸೇರಿ  ಅಲ್ಲಿಂದ ಲಿಂಗರಾಜಪುರ ಮುಖಾಂತರ  ಮುಂದೆ ಸಾಗಬಹುದಾಗಿರುತ್ತದೆ.

ಟ್ಯಾನರಿ ರಸ್ತೆ ಈದ್ಗಾ ಮೈದಾನದ ಬಳಿ ನೇತಾಜಿ ರಸ್ತೆಯಿಂದ ಟ್ಯಾನರಿ ರಸ್ತೆಯ ಕಡೆಗೆ ಸಾಗುವ ವಾಹನಗಳನ್ನು ಪಾಟರಿ ಸರ್ಕಲ್ ಬಳಿ ನಿರ್ಬಂಧಿಸಿ ಎಂ.ಎಂ.ರಸ್ತೆಯ ಕಡೆಗೆ ಸಂಚಾರ ಮಾರ್ಗ ಬದಲಾವಣೆ ಮಾಡಿ ಮಾಸ್ಕ್ ರಸ್ತೆಯ ಮುಖಾಂತರ ಡೇವಿಸ್ ರಸ್ತೆ, ಲಿಂಗರಾಜಪುರ, ಹೆಣ್ಣೂರು ಮುಖ್ಯ ರಸ್ತೆ  ಸೇರಬಹುದಾಗಿರುತ್ತದೆ.

ಮಿಲ್ಲರ್ ರಸ್ತೆಯ ಈದ್ಗಾ ಮೈದಾನ ( ಹಜ್ ಕ್ಯಾಂಪ್ )ದಲ್ಲಿ ಹೈನ್ಸ್ ರಸ್ತೆಯಿಂದ ಹಜ್ ಕ್ಯಾಂಪ್ ಕಡೆಗೆ ಹೋಗುವ ವಾಹನಗಳನ್ನು ನಿರ್ಬಂಧಿಸಿ ಹೈನ್ಸ್ ರಸ್ತೆಯಲ್ಲಿ ಸುಲ್ತಾನ್ ಜಿ ಗುಂಟಾ ರಸ್ತೆಯ ಕಡೆಗೆ ಮಾರ್ಗ ಬದಲಾವಣೆ ಮಾಡಿ ಕಳುಹಿಸಲಾಗುವುದು.

ಜಯಮಹಲ್ ಕಡೆಯಿಂದ ಹಜ್ ಕ್ಯಾಂಪ್ ಕಡೆಗೆ ಬರುವ ವಾಹನಗಳನ್ನು ಕಂಟೋನ್‍ಮೆಂಟ್ ಅಂಡರ್ ಬ್ರಿಡ್ಜ್ ಬಳಿ ಮಾರ್ಗ ಬದಲಾವಣೆ ಮಾಡಿ ಕಂಟೋನ್‍ಮೆಂಟ್ ರೈಲ್ವೆ ಸ್ಟೇಷನ್ ಮೂಲಕ ಕಳುಹಿಸಿಕೊಡಲಾಗುವುದು

ನಂದಿದುರ್ಗಾ ರಸ್ತೆಯಲ್ಲಿ ಹಜ್ ಕ್ಯಾಂಪ್ ಕಡೆಗೆ ಬರುವ ವಾಹನಗಳನ್ನು ಬೆನ್ಸ್‍ನ್ ಟೌನ್ ಬಳಿಯೇ ನಿರ್ಬಂಧಿಸಿ ಬೆನ್ಸ್‍ನ್ ಟೌನ್ ಮುಖಾಂತರ ಟ್ಯಾನರಿ ರಸ್ತೆ ಸೇರಿ ಮುಂದೆ ಸಾಗಬಹುದಾಗಿರುತ್ತದೆ. ರಂಜಾನ್ ಪ್ರಾರ್ಥನಾಕೂಟಗಳು ನಾಳೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ನಡೆಯಲಿದ್ದು ಅಲ್ಲಿಯವರೆಗೆ ಈ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.


ಸಂಬಂಧಿತ ಟ್ಯಾಗ್ಗಳು

Ramadan Police Bengaluru Prayer


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ