‘ನೇತ್ರಾವತಿ ನದಿಯನ್ನು ನುಂಗುತ್ತಿದೆಯಾ ಎತ್ತಿನಹೊಳೆ ಕಾಮಗಾರಿ?’

S R Hiremath Statement

04-06-2019

ಬೆಂಗಳೂರು : ಕಪ್ಪತ ಗುಡ್ಡದ ಪ್ರದೇಶದಲ್ಲಿ ಕೆಲ ಕಾರ್ಪೆಟ್ ಕಂಪನಿಗಳ ಸಂಚಿನಿಂದ ಗಣಿಗಾರಿಕೆ ನಡೆಯುತ್ತಿದ್ದು ಇದನ್ನು ರಾಜ್ಯ ಸರ್ಕಾರ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ್ ದೂರಿದರು.

ನಗರದ ಚಿತ್ರಕಲಾ ಪರಿಷತ್‍ನಲ್ಲಿ ನೇತ್ರಾವತಿ ನದಿಯನ್ನು ನುಂಗುತ್ತಿದೆಯಾ ಎತ್ತಿನಹೊಳೆ ಕಾಮಗಾರಿ ವಿಷಯ ಕುರಿತಂತೆ ಸುಧೀರ್ ಶೆಟ್ಟಿಯವರು ಏರ್ಪಡಿಸಿದ್ದ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿ ಮಾತನಾಡಿದ ಅವರು ಕಪ್ಪತ ಗುಡ್ಡದಲ್ಲಿ ಗಣಿಗಾರಿಕೆ ಬೇಡ ಎಂದು ರಾಜ್ಯ ಉಚ್ಛನ್ಯಾಯಾಲಯದ ವಿಭಾಗೀಯ ಪೀಠ ಹೇಳಿದ್ದರೂ ಕದ್ದು ಮುಚ್ಚಿ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿದರು.

ಎತ್ತಿನಹೊಳೆ ಯೋಜನೆಯಿಂದ ಬಂಡೀಪುರ ರಾತ್ರಿ ವಾಹನ ಸಂಚಾರ ಬಂದಿದೆ. ಕಪ್ಪತ ಗುಡ್ಡ ಮರಗಳ ಮಾರಣಹೋಮ ನಡೆದಿದೆ. ಇಂತಹ ಪರಿಸರ ವಿರೋಧಿ ಕ್ರಮಗಳಿಂದ ಪರಿಸರ ನಾಶವಾಗಿ ನೈಸರ್ಗಿಕ ಪ್ರಕ್ರಿಯೆಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.

ಕಾರ್ಪೆಟ್ ಕಂಪನಿಗಳ ಮಾಲೀಕರ ತಮ್ಮ ಹಣದ ಪ್ರಭಾವದಿಂದ ಪರಿಸರ ನಾಶ ಮಾಡುತ್ತಿದ್ದಾರೆ. ನಮ್ಮ ಸಂಘಟನೆ ವತಿಯಿಂದ ನಡೆಸುತ್ತಿರುವ ಹೋರಾಟಕ್ಕೆ ಸಚಿವ ಹೆಚ್.ಕೆ. ಪಾಟೀಲ್ ಹಾಗೂ ವನ್ಯಜೀವಿ ಸಂರಕ್ಷಣಾ ಇಲಾಖೆ ಸೂಕ್ತ ಸ್ಪಂದನೆ ನೀಡಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

S R Hiremath Nethravathi River Ettinahote


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ