ಕಳ್ಳಬಟ್ಟಿ ಕುಡಿದು 12 ಮಂದಿ ಅಸ್ವಸ್ಥ

12 People hositalised in Chikkaballapur

04-06-2019

ಕಲುಷಿತ ಕಳ್ಳಬಟ್ಟಿ ಸೇವಿಸಿ 12 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಗಡಿಗೆ ಹೊಂದಿಕೊಂಡಂತೆ ಇರುವ ಆಂಧ್ರಪ್ರದೇಶದ ಹಳ್ಳಿಗಳಲ್ಲಿ ಕಳ್ಳಬಟ್ಟಿ ಮಾರಾಟ ಎಗ್ಗಿಲ್ಲದೆ ನಡೆದಿದ್ದು, ಈಚಲು ಮರಗಳಿಂದ ತೆಗೆಯುವ ನೀರಾಕ್ಕೆ ರಾಸಾಯನಿಕ ಮಿಶ್ರಣ ಮಾಡಿ ಕಳ್ಳಭಟ್ಟಿಯಾಗಿ ಪರಿವರ್ತನೆ ಮಾಡಿ ಮಾರಾಟ ಮಾಡಲಾಗುತ್ತಿದೆ. ಇಂತಹ ಶೇಂದಿ ಸೇವನೆ ಮಾಡಿದ ತಾಲೂಕಿನ ಗುಟ್ಟಪಾಳ್ಯ ಗ್ರಾಮದ ಓರ್ವ ಬಾಲಕ ಸೇರಿ ಮೂವರು ಮಹಿಳೆಯರು, 8 ಮಂದಿ ಪುರುಷರು ಬಾಗೇಪಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೂಲಿಗೆಂದು ಗಡಿಭಾಗದ ಆಂಧ್ರದ ಕಮ್ಮವಾರಪಲ್ಲಿಗೆ ತೆರಳಿದ್ದ ಈ 12 ಮಂದಿ ಕಳ್ಳಬಟ್ಟಿ ಸೇವಿಸಿದ್ದರು. ತೀವ್ರ ಹೊಟ್ಟೆನೋವು ಹಾಗೂ ಭೇದಿ ಕಾಣಿಸಿಕೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

Drinks Chikballapura Hospital Bengaluru


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ