ಪ್ರಾಧಿಕಾರದಿಂದ ಕೆ.ಆರ್.ಎಸ್. ಪರಿಶೀಲನೆ

KRS review

04-06-2019

ರಾಜ್ಯಕ್ಕೆ ಇನ್ನೂ ಮುಂಗಾರು ಕಾಲಿಟ್ಟಿಲ್ಲ. ಯಾವ ಪ್ರಮಾಣದಲ್ಲಿ ಮಳೆ ಬರಲಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ, ಆದರೆ ಈಗಾಗಲೇ ಕಾವೇರಿಯಿಂದ ತಮಿಳುನಾಡಿಗೆ ಎಷ್ಟು ನೀರು ಬಿಡುಗಡೆ ಮಾಡಬೇಕು ಎಂಬ ಲೆಕ್ಕಾಚಾರ ಆರಂಭಗೊಂಡಿದೆ.
ಕಳೆದ ವಾರ ದೆಹಲಿಯಲ್ಲಿ ನಡೆದ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ಪ್ರಸಕ್ತ ಹಂಗಾಮಿನಲ್ಲಿ ತಮಿಳುನಾಡಿಗೆ ಎಷ್ಟು ನೀರು ಬಿಡಬೇಕು ಎಂಬ ಬಗ್ಗೆ ಸಲಹೆ ನೀಡಿದೆ. ಪ್ರಾಧಿಕಾರದ ತೀರ್ಮಾನ ಮಂಡ್ಯ ಸೇರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಆತಂಕ ಮೂಡಿಸಿದೆ.
ಈ ಆತಂಕದ ಬೆನ್ನಲ್ಲೇ ಇದೀಗ ಕಾವೇರಿ ನಿರ್ವಹಣಾ ಮಂಡಳಿ ರಾಜ್ಯದ ಕಾವೇರಿ ಜಲಾನಯನ ಪ್ರದೇಶಕ್ಕೆ ಭೇಟಿ ನೀಡಿದೆ. ಜಲಾಶಯಗಳಲ್ಲಿ ಇರುವ ನೀರಿನ ಸಂಗ್ರಹಣೆ, ನೀರಾವರಿ ಪ್ರದೇಶದಲ್ಲಿ ಇರುವ ಬೆಳೆ, ಅದಕ್ಕೆ ಬೇಕಾಗುವ ನೀರು, ಪರಿಸರ ಸಮತೋಲನ ಮತ್ತು ಕುಡಿಯುವ ನೀರಿನ ಅಗತ್ಯತೆಯ ಲೆಕ್ಕಾಚಾರ ಮಾಡಲಿದೆ.
ಕೇಂದ್ರ ಸರ್ಕಾರ, ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿಯ ಹಿರಿಯ ಅಧಿಕಾರಿಗಳನ್ನೊಳಗೊಂಡಿರುವ ಈ ತಂಡ ಪರಿಸ್ಥಿತಿಯ ಅವಲೋಕನದ ನಂತರ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಿದೆ.


ಸಂಬಂಧಿತ ಟ್ಯಾಗ್ಗಳು

KRS Rain Cauvery Report


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ