ಹಣ್ಣುಗಳನ್ನು ತಿಂದಾದ ಮೇಲೆ ನೀರು ಕುಡಿಯುವುದು ಎಷ್ಟು ಸರಿ?

Is it Alright to Drink Water After Eating Fruits?

04-06-2019

ಸಾಮಾನ್ಯವಾಗಿ ಜನರು ಊಟ ಮಾಡುವಾಗ ಹಾಗೂ ಮಾಡಿದ ತಕ್ಷಣ, ಹಣ್ಣುಗಳನ್ನು ತಿನ್ನುವಾಗ ಅಥವಾ ತಿಂದ ತಕ್ಷಣ ನೀರನ್ನು ಕುಡಿಯುತ್ತಾರೆ. ಆದರೆ ಹೀಗೆ ನೀರನ್ನು ಕುಡಿಯುವುದು ಅಷ್ಟು ಆರೋಗ್ಯಕರ ಅಭ್ಯಾಸವಲ್ಲ ಎನ್ನುವುದು ತಜ್ಞರ ಅಭಿಪ್ರಾಯ.

ಹೌದು.. ಹಣ್ಣುಗಳನ್ನು ತಿನ್ನುವಾಗ ಹಾಗೂ ತಿಂದಾದ ತಕ್ಷಣ ನೀರನ್ನು ಕುಡಿಯುವುದರಿಂದ ಹೊಟ್ಟೆ ಗ್ಯಾಸ್ ತುಂಬಿದಂತೆ ಉಬ್ಬಿಕೊಂಡಿರುವುದು ಹಾಗೂ ಜೀರ್ಣಕ್ರಿಯೆಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎನ್ನುವುದು ಆಹಾರ ತಜ್ಞೆ ಶಿಲ್ಪಾ ಅರೋರಾ ಅಭಿಪ್ರಾಯ. ಅದರಲ್ಲೂ ಕಲ್ಲಂಗಡಿಯಂಥ ನೀರು ಹೆಚ್ಚಿನ ಪ್ರಮಾಣದಲ್ಲಿರುವ ಹಣ್ಣನ್ನು ಹಾಗೆಯೇ ತಿನ್ನಬೇಕು ಎನ್ನುತ್ತಾರೆ.

ಡಾ.ಜೆ.ವಿ ಹೆಬ್ಬಾರ್ ಪ್ರಕಾರ, ಯಾವುದೇ ಆಹಾರವನ್ನು ಸೇವಿಸಿದ ತಕ್ಷಣ ನೀರನ್ನು ಕುಡಿಯುವುದು ಆರೋಗ್ಯಕರ ಅಭ್ಯಾಸವಲ್ಲ. ಆದರೆ ಊಟದ ಮಧ್ಯೆ ಸ್ವಲ್ಪ ನೀರನ್ನು ಸೇವಿಸಬಹುದಷ್ಟೆ. ಇನ್ನು ಆಯುರ್ವೇದಲ್ಲಿ ಕೂಡ ಊಟಕ್ಕಿಂತ ಮೊದಲು ಹಾಗೂ ಊಟವಾದ ತಕ್ಷಣ ನೀರನ್ನು ಕುಡಿಯುವುದು ಆರೋಗ್ಯಕರವಲ್ಲ ಎನ್ನಲಾಗುತ್ತದೆ.


ಸಂಬಂಧಿತ ಟ್ಯಾಗ್ಗಳು

Water Fruits Diet Ayurveda


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ