ಮಾದೇಶ್ವರನ ಕಾಲದಲ್ಲಿ ಎಲೆಕ್ಷನ್ ಇತ್ತಾ..?

TV Serial

03-06-2019

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಉಘೇ ಉಘೇ ಮಾದೇಶ್ವರ ಧಾರಾವಾಹಿ ಭಕ್ತಿ ಪ್ರಧಾನವಾಗಿದ್ದು, ಸಾಕಷ್ಟು ವೀಕ್ಷಕರನ್ನು ಹೊಂದಿದೆ. ಬರೀ ಅಪರಾಧ, ಅತ್ತೆ ಸೊಸೆ ಜಗಳ, ಹುಳುಕು, ಕೊಳಕು, ಪ್ರೀತಿ, ಪ್ರೇಮ ಆಧಾರಿತ ಧಾರಾವಾಹಿಗಳ ಮಧ್ಯೆ ಭಕ್ತಿ ಪ್ರಧಾನ ಧಾರಾವಾಹಿಯಾಗಿ ಉಘೇ ಉಘೇ ಮಾದೇಶ್ವರ ವಿಭಿನ್ನವಾಗಿರುವುದು ನಿಜ. ಮಾದೇಶ್ವರನ ಭಕ್ತರಲ್ಲೇ ಪೌರಾಣಿಕ ಧಾರಾವಾಹಿಯಾದ್ದರಿಂದ ದೇವರ ಮೇಲೆ ಭಕ್ತಿ ಇರುವಂಥ ಅನೇಕ ಜನರು ಈ ಧಾರಾವಾಹಿಯ ಖಾಯಂ ವೀಕ್ಷಕರು.

ಆದರೆ ಮಾದೇಶ್ವರನ ಕಾಲದಲ್ಲಿ ಎಲೆಕ್ಷನ್ ಇತ್ತಾ ಎನ್ನುವಂಥ ಪ್ರಶ್ನೆ ವೀಕ್ಷಕರಲ್ಲಿ ಉದ್ಭವವಾಗಿದ್ದು ಇತ್ತೀಚಿಗಿನ ಸಂಚಿಕೆಗಳನ್ನು ನೋಡಿದ ಮೇಲೆ. ಇದಕ್ಕೆ ಕಾರಣವೂ ಇದೆ. ಈ ಧಾರಾವಾಹಿಯಲ್ಲಿ ಬರುವ ಬೇಟೆಗಾರ ಪಾತ್ರಧಾರಿಗೆ ಕೈ ಬೆರಳಲ್ಲಿ ಮತದಾನ ಮಾಡಿದ ಮೇಲೆ ಹಾಕುವ ಇಂಕ್ ನ ಗುರುತು ಅಚ್ಚಾಗಿದೆ. ಅದು ವೀಕ್ಷಕರಿಗೆ ಸ್ಪಷ್ಟವಾಗಿ ಕಾಣುವಂತೆಯೂ ಚಿತ್ರೀಕರಿಸಲಾಗಿದೆ. ಹೀಗಾಗಿಯೇ ಜನರಿಗೆ ಇಂಥದ್ದೊಂದು ಪ್ರಶ್ನೆ ಮೂಡಿದೆ. ಅದನ್ನು ಮರೆಮಾಚುವಂತೆ ಚಿತ್ರೀಕರಿಸಲಾಗುತ್ತಿತ್ತಾದರೂ ಛಾಯಾಗ್ರಾಹಕರು ಹಾಗೂ ನಿರ್ದೇಶಕರು ಅದನ್ನು ಮರೆತುಬಿಟ್ಟಿದ್ದಾರೆಯೇ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

TV Serial Channel Actor Zee Kannada


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ