ಅಪ್ಪನೇ ಮಗನನ್ನು ನೇಣುಹಾಕಿದ್ದ ಪ್ರಕರಣ : ಐವರ ಬಂಧನ

Bangalore Crime

03-06-2019

ಬೆಂಗಳೂರು: ಚೀಟಿ ವ್ಯವಹಾರದಲ್ಲಿ ಉಂಟಾದ ಅವಮಾನದಿಂದ ಕುಟುಂಬ ಸಮೇತ ಆತ್ಮಹತ್ಯೆಗೆ ನಿರ್ಧರಿಸಿ ತನ್ನ 12 ವರ್ಷದ ಮಗನನ್ನು ನೇಣುಹಾಕಿ ಕೊಲೆ ಮಾಡಿ, ಪತ್ನಿಯ ಆತ್ಮಹತ್ಯೆಗೂ ಪತಿ ಕಾರಣನಾಗಿದ್ದ ಪ್ರಕರಣದ ಸಂಬಂಧ 5 ಮಂದಿ ಆರೋಪಿಗಳನ್ನು ಹೆಚ್‍ಎಎಲ್ ಪೊಲೀಸರು ಬಂಧಿಸಿದ್ದಾರೆ.

ವಿಭೂತಿಪುರದ ಸುಧಾ, ಮಂಜು, ಡೈಸಿ, ಪ್ರಭಾವತಿ ಹಾಗೂ ರಾಮ್ ಬಹದ್ದೂರ್ ಬಂಧಿತ ಆರೋಪಿಗಳಾಗಿದ್ದಾರೆ. ಚೀಟಿ ವ್ಯವಹಾರ ನಡೆಸುತ್ತಿದ್ದ ಸುರೇಶ್ ಹಾಗೂ ದಂಪತಿಗೆ ಬಂಧಿತ 5 ಮಂದಿ ಕಿರುಕುಳ ನೀಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಆರೋಪಿಗಳ ಕಿರುಕುಳದಿಂದ ಸುರೇಶ್ ಬಾಬು ಹಾಗೂ ಅವರ ಪತ್ನಿ ಗೀತಾ ಬಾಯಿ, ಇಬ್ಬರು ಮಕ್ಕಳ ಜೊತೆ ಸಾಮೂಹಿಕ ಆತ್ಮಹತ್ಯೆಗೆ ನಿರ್ಧರಿಸಿದ್ದರು. ಅದರಂತೆ, ಕಳೆದ ಜೂನ್ 1 ರಂದು ರಾತ್ರಿ ಸುರೇಶ್ ಬಾಬು, 12 ವರ್ಷದ ಪುತ್ರ ವರುಣ್‍ನನ್ನು ನೇಣು ಬಿಗಿದು ಕೊಲೆಮಾಡಿ, ನಂತರ ಪತ್ನಿಯ ಜೊತೆ ನೇಣುಹಾಕಿಕೊಳ್ಳಲು ನಿರ್ಧರಿಸಿದ್ದ.

ಈ ದೃಶ್ಯವನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸುವಂತೆ ಮಗಳಿಗೆ ಹೇಳಿದ್ದ. ತಮ್ಮನನ್ನು ನೇಣುಹಾಕಿದ ದೃಶ್ಯವನ್ನು ಚಿತ್ರೀಕರಿಸಿಕೊಂಡಿದ್ದ ಆಕೆ, ಕೃತ್ಯ ನೋಡಿ ಗಾಬರಿಗೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ಕೂಗಾಡಿದ್ದಳು. ಆ ವೇಳೆಗಾಗಲೇ ಗೀತಾಬಾಯಿ ನೇಣಿಗೆ ಕೊರಳೊಡ್ಡಿದ್ದರು.

ಗಲಾಟೆ ಮಾಡುತ್ತಿದ್ದ ಮಗಳನ್ನು ಕರೆದುಕೊಂಡು ಹೊರಗೆ ಬಂದ ಸುರೇಶ್ ಬಾಬು ಕೊಠಡಿಯ ಬಾಗಿಲು ಹಾಕಿ ಕೂಗಾಡಿ ಸ್ಥಳೀಯರಿಗೆ ಪತ್ನಿ ಹಾಗೂ ಮಗ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿಕೆ ಕೊಟ್ಟಿದ್ದ. ಪ್ರಕರಣದ ಸಂಬಂಧ ತನಿಖೆ ಕೈಗೊಂಡು ಸುರೇಶ್ ಬಾಬು ದಂಪತಿ ಬಳಿ ಚೀಟಿ ಹಾಕಿ ಹಣ ಕೊಡದಿದ್ದಕ್ಕೆ ಕಿರುಕುಳ ನೀಡಿದ್ದ 5 ಮಂದಿಯನ್ನು ಬಂಧಿಸಲಾಗಿದೆ ಎಂದು ಹೆಚ್‍ಎಎಲ್ ಪೊಲೀಸರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Suicide Son Arrest Crime


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ