ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್.ವಿಶ್ವನಾಥ್ ರಾಜೀನಾಮೆ?

H Vishvanath decided to resign for JDS state Pesident post

03-06-2019

ಲೋಕಸಭಾ ಚುನಾವಣೆಯ ಸೋಲಿನಿಂದ ತತ್ತರಿಸಿರುವ ಜಾತ್ಯಾತೀತ ಜನತಾದಳದಲ್ಲಿ ಇದೀಗ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಪಕ್ಷದ ವಿದ್ಯಮಾನಗಳಿಂದ ಬೇಸರಗೊಂಡಿರುವ ಪಕ್ಷದ ರಾಜ್ಯಾದ್ಯಕ್ಷ ಎಚ್. ವಿಶ್ವನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಕಳೆದ ಲೋಕಸಭಾ ಚುನಾವಣೆ ಸಮಯದಲ್ಲೆ ವಿಶ್ವನಾಥ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದರು ಆದರೆ ಚುನಾವಣೆ ಸಮಯದಲ್ಲಿ ಇದರಿಂದಾಗಿ ಗೊಂದಲ ಉಂಟಾಗಬಹುದು ಎಂದು ನಿರ್ಧಾರವನ್ನು ಮುಂದೂಡಿದ್ದರು.

ಇದೀಗ ತಮ್ಮ ನಿರ್ಧಾರವನ್ನು ಮಾಜಿ ಪ್ರಧಾನಿ ದೇವೆಗೌಡ ಅವರಿಗೆ ತಿಳಿಸಿರುವ ವಿಶ್ವನಾಥ್ ಈ ವಿಚಾರದಲ್ಲಿ ತಮ್ಮ ನಿಲುವು ಅಚಲ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ಹಿರಿಯ ನಾಯಕರಾದ ತಮಗೆ ಪಕ್ಷದ ಅಧ್ಯಕ್ಷ ಹುದ್ದೆಯಂತಹ ಮಹತ್ವದ ಜವಾಬ್ದಾರಿ ನೀಡಲಾಗಿದೆ ಆದರೆ ಪಕ್ಷದ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಸಮಯದಲ್ಲಿ ತಮ್ಮ ಅಭಿಪ್ರಾಯ ಕೇಳುತ್ತಿರಲಿಲ್ಲ. ಯಾವುದೇ ನಿರ್ಧಾರದಲ್ಲಿ ತಮ್ಮ ಪಾತ್ರ ಇರುತ್ತಿರಲಿಲ್ಲ ಯಾವುದೇ ಅಧಿಕಾರ ಇಲ್ಲದ ಇಂತಹ ಹುದ್ದೆಯಲ್ಲಿ ಮುಂದುವರೆಯುವುದರಲ್ಲಿ ಪ್ರಯೋಜನ ಇಲ್ಲ ಎಂದಿರುವ ಅವರು ಇದಕ್ಕೆ ಬದಲಾಗಿ ಶಾಸಕರಾಗಿ ಇರುವುದೆ ಸೂಕ್ತ ಎಂಬ ನಿಲುವು ತಳೆದಿದ್ದಾರೆ.

ಮೊನ್ನೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಅಧ್ಯಕ್ಷ ರಾದ ತಮ್ಮನ್ನು ಲೆಕ್ಕ ಕ್ಕೆ ತೆಗೆದುಕೊಳ್ಳಲಿಲ್ಲ. ಅದರಲ್ಲೂ ತಾವು ಹಲವಾರು ಬಾರಿ ಪ್ರತಿನಿಧಿಸಿದ ಕೆ.ಆರ್. ನಗರ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಯಲ್ಲಿ ತಮ್ಮ ಮಾತಿಗೆ ಮಾನ್ಯತೆ ಸಿಗಲಿಲ್ಲ ಎಂದು ಬೇಸರಗೊಂಡಿರುವ ವಿಶ್ವನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

H Vishvanath JDS MLA President


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ