ಮೋದಿ ಸಂಪುಟದಲ್ಲಿ ಯಾವ ಖಾತೆ ಯಾರಿಗೆ?

Ministers list in Modi cabinet

01-06-2019

ದೆಹಲಿ: ಸತತ 2ನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ
ಮೋದಿ, ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಇದೇ ಮೊದಲ ಬಾರಿ ಸಂಸತ್
ಪ್ರವೇಶಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗೃಹ ಖಾತೆ, ಹಿರಿಯ ಅನುಭವಿ
ರಾಜಕಾರಣಿ ರಾಜನಾಥ್ ಸಿಂಗ್ ರಕ್ಷಣಾ ಇಲಾಖೆಯ ಜವಾಬ್ದಾರಿ ಹೊತ್ತಿದ್ದಾರೆ.
ಈ ಹಿಂದೆ ರಕ್ಷಣಾ ಖಾತೆಯನ್ನು ನಿರ್ವಹಿಸಿದ್ದ ಮತ್ತು ರಾಜ್ಯಸಭೆಯಲ್ಲಿ ಕರ್ನಾಟವನ್ನು
ಪ್ರತಿನಿಧಿಸುತ್ತಿರುವ ನಿರ್ಮಲಾ ಸೀತಾರಾಮನ್ ಹಣಕಸು ಸಚಿವೆಯಾಗಿದ್ದಾರೆ.  ಮೊದಲ ಬಾರಿ
ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್
ಜೈಶಂಕರ್ ವಿದೇಶಾಂಗ ಖಾತೆ ಹೊಣೆ ವಹಿಸಲಾಗಿದೆ.
ಯಾವ ಖಾತೆ ಯಾರಿಗೆ?
ನರೇಂದ್ರ ಮೋದಿ: ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳು,
ಪರಮಾಣು ಶಕ್ತಿ ಇಲಾಖೆ, ಬಾಹ್ಯಾಕಾಶ ಇಲಾಖೆ, ಎಲ್ಲ ಪ್ರಮುಖ ನೀತಿಗಳ ನಿರ್ವಹಣೆ ಮತ್ತು
ಇತರೆ ಹಂಚಿಕೆಯಾಗದ ಖಾತೆಗಳು
ಅಮಿತ್ ಶಾ: ಗೃಹ ಖಾತೆ
ರಾಜನಾಥ್ ಸಿಂಗ್: ರಕ್ಷಣಾ ಖಾತೆ
ನಿತಿನ್ ಗಡ್ಕರಿ: ಸಾರಿಗೆ, ಹೆದ್ದಾರಿ ಸಚಿವಾಲಯ, ಸಣ್ಣ, ಮಧ್ಯಮ ಮತ್ತು ಬೃಹತ್
ಕೈಗಾರಿಕಾ ಖಾತೆ ಡಿವಿ ಸದಾನಂದಗೌಡ: ರಸಗೊಬ್ಬರ ಖಾತೆ
ನಿರ್ಮಲಾ ಸೀತಾರಾಮನ್: ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರ
ರಾಮ್ ವಿಲಾಸ್ ಪಾಸ್ವಾನ್: ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸರಬರಾಜು
ನರೇಂದ್ರ ಸಿಂಗ್ ತೋಮರ್: ಕೃಷಿ ಮತ್ತು ರೈತರ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು
ಪಂಚಾಯತ್ ರಾಜ್ ಖಾತೆ
ರವಿ ಶಂಕರ್ ಪ್ರಸಾದ್: ಕಾನೂನು ಮತ್ತು ನ್ಯಾಯಾಂಗ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ
ತಂತ್ರಜ್ಞಾನ ಖಾತೆ
ಹರ್ಸೀಮ್ರತ್ ಕೌರ್: ಆಹಾರ ಸಂಸ್ಕರಣಾ ಖಾತೆ
ತಾವರ್ ತಂದ್ ಗೆಹ್ಲೋಟ್: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ಎಸ್ ಜೈಶಂಕರ್: ವಿದೇಶಾಂಗ
ರಮೇಶ್ ಪೋಖ್ರಿಯಲ್: ಮಾನವ ಸಂಪನ್ಮೂಲ ಅಭಿವೃದ್ಧಿ
ಅರ್ಜುನ್ ಮುಂಡಾ: ಬುಡಕಟ್ಟು ವ್ಯವಹಾರ
ಸ್ಮೃತಿ ಇರಾನಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ, ಜವಳಿ
ಡಾ.ಹರ್ಷವರ್ಧನ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ,
ಭೂ ವಿಜ್ಞಾನ
ಪ್ರಕಾಶ್ ಜವಡೇಕರ್: ಪರಿಸರ, ಅರಣ್ಯ, ಹವಾಮಾನ ಬದಲಾವಣೆ, ಮಾಹಿತಿ ಮತ್ತು ಪ್ರಸಾರ
ಪಿಯೂಶ್ ಗೋಯಲ್: ರೈಲ್ವೇ, ವಾಣಿಜ್ಯ ಮತ್ತು ಕೈಗಾರಿಕೆ
ಧರ್ಮೇಂದ್ರ ಪ್ರಧಾನ್: ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಉಕ್ಕು
ಮುಖ್ತಾರ್ ಅಬ್ಬಾಸ್ ನಖ್ವಿ: ಅಲ್ಪ ಸಂಖ್ಯಾತ ವ್ಯವಹಾರ
ಪ್ರಲ್ಹಾದ್ ಜೋಷಿ: ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿಗಾರಿಕೆ
ಮಹೇಂದ್ರ ನಾಥ್ ಪಾಂಡೇ: ಕೌಶಲ್ಯ ಅಭಿವೃದ್ಧಿ, ಹೊಸ ಉದ್ಯಮ
ಅರವಿಂದ ಗಣಪತ್ ಸಾವಂತ್: ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ
ಗಿರಿರಾಜ್ ಸಿಂಗ್: ಪಶುಸಂಗೋಪನೆ ಮತ್ತು ಮೀನುಗಾರಿಕೆ
ಗಜೇಂದ್ರ ಸಿಂಗ ಶೇಖಾವತ್: ಜಲಶಕ್ತಿ, ಸ್ವತಂತ್ರ ಖಾತೆ
ಸಂತೋಷ್ ಕುಮಾರ್ ಗಂಗ್ವಾರ್: ಕಾರ್ಮಿಕ ಮತ್ತು ಉದ್ಯೋಗ ಖಾತೆ
ರಾವ್ ಇಂದ್ರಜಿತ್ ಸಿಂಗ್: ಕಾರ್ಯಕ್ರಮ ಅನುಷ್ಠಾನ  ಮತ್ತು ಅಂಕಿ ಅಂಶ
ಶ್ರೀಪಾದ್ ಯೆಸ್ಸೋ ನಾಯಕ್: ಆಯುರ್ವೇದ, ಯೋಗ, ಯುನಾನಿ, ರಕ್ಷಣಾ ಖಾತೆ ರಾಜ್ಯ ಸಚಿವ
ಡಾ.ಜಿತೇಂದ್ರ ಸಿಂಗ್: ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವಾಲಯ ಮತ್ತು ಪ್ರಧಾನಿ
ಕಾರ್ಯಾಲಯ ಸಚಿವ; ಬಾಹ್ಯಾಕಾಶ ಮತ್ತು ಪರಮಾಣು ಇಂಧನ
ಕಿರಣ್ ರಿಜಿಜು: ಯುವಜನ ಮತ್ತು ಕ್ರೀಡೆ ಮತ್ತು ಅಲ್ಪಸಂಖ್ಯಾತ ವ್ಯವಹಾರ
ಪ್ರಹ್ಲಾದ್ ಸಿಂಗ್ ಪಟೇಲ್: ಸಂಸ್ಕೃತಿ ಮತ್ತು ಪ್ರವಾಸೋದ್ಯಮ
ರಾಜ್ಕುಮಾರ್ ಸಿಂಗ್: ಇಂಧನ ಖಾತೆ, ಮರುಬಳಕೆ ಇಂಧನ ಮತ್ತು ಕೌಶಲ್ಯಾಭಿವೃದ್ಧಿ
ಹರ್ದೀಪ್ ಸಿಂಗ್ ಪುರಿ: ವಸತಿ ಮತ್ತು ನಗರಾಭಿವೃದ್ಧಿ, ನಾಗರಿಕ ವಿಮಾನಯಾನ, ವಾಣಿಜ್ಯ
ಮತ್ತು ಕೈಗಾರಿಕೆ
ಮನ್ಸುಕ್ ಎಲ್ ಮಾಂಡವೀಯಾ: ಹಡಗು, ರಾಸಯನಿಕ ಮತ್ತು ರಸಗೊಬ್ಬರ ಖಾತೆ
ರಾಜ್ಯ ಸಚಿವ
ಫಗ್ಗನ್ ಸಿಂಗ್ ಕುಲಸ್ತೆ: ಉಕ್ಕು ಖಾತೆ
ಅಶ್ವಿನ್ ಕುಮಾರ್ ಚೌಬೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಅರ್ಜುನ್ ರಾಮ್ ಮೇಘ್ವಾಲ್: ಸಂಸದೀಯ ವ್ಯವಹಾರಗಳು, ಭಾರೀ ಕೈಗಾರಿಕೆ
ನಿವೃತ್ತ ಜನರಲ್ ವಿ.ಕೆ.ಸಿಂಗ್: ರಾಜ್ಯ ಹೆದ್ದಾರಿ ಮತ್ತು ಸಾರಿಗೆ
ಕೃಷ್ಣನ್ ಪಾಲ್: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ದಾನ್ವೆ ರಾವ್ ಸಾಹೇಬ್ ದಾದಾ ರಾವ್: ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ
ಜಿ ಕೃಷ್ಣನ್ ರೆಡ್ಡಿ: ಗೃಹ ಖಾತೆ
ಪುರುಷೋತ್ತಮ್ ರುಪಾಲಾ: ಕೃಷಿ ಮತ್ತು ರೈತರ ಕಲ್ಯಾಣ
ರಾಮ್ದಾಸ್ ಅಠಾವಳೆ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ಸಾಧ್ವಿ ನಿರಂಜನ್ ಜ್ಯೋತಿ: ಗ್ರಾಮೀಣಾಭಿವೃದ್ಧಿ
ಬಾಬುಲ್ ಸುಪ್ರಿಯೋ: ಪರಿಸರ, ಹವಾಮಾನ ಬದಲಾವಣೆ
ಸಂಜೀವ್ ಕುಮಾರ್ ಬಲ್ಯಾನ್: ಪಶುಸಂಗೋಪನೆ, ಮೀನುಗಾರಿಕೆ
ಧೋತ್ರೆ ಸಂಜಯ್ ಶಾಮ್ರಾವ್: ಮಾನವ ಸಂಪನ್ಮೂಲ, ಸಂಪರ್ಕ, ಮಾಹಿತಿ ತಂತ್ರಜ್ಞಾನ
ಅನುರಾಗ್ ಸಿಂಗ್ ಠಾಕೂರ್: ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳು
ಸುರೇಶ್ ಅಂಗಡಿ: ರೈಲ್ವೆ ಖಾತೆ
ನಿತ್ಯಾನಂದ್ ರೈ: ಗೃಹ ವ್ಯವಹಾರ
ರತನ್ ಲಾಲ್ ಕಟಾರಿಯಾ: ಜಲಶಕ್ತಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ವಿ.ಮುರಳೀಧರನ್: ವಿದೇಶಾಂಗ ವ್ಯವಹಾರಗಳು, ಸಂಸದೀಯ ವ್ಯವಹಾರ
ರೇಣುಕಾ ಸಿಂಗ್ ಸರುತಾ: ಬುಡಕಟ್ಟು ವ್ಯವಹಾರ
ಸೋಮ್ ಪರ್ಕಾಶ್: ವಾಣಿಜ್ಯ ಮತ್ತು ಕೈಗಾರಿಕೆ
ರಾಮೇಶ್ವರ್ ತೇಲಿ: ಆಹಾರ ಸಂಸ್ಕರಣೆ
ಪ್ರತಾಪ್ ಚಂದ್ರ ಸಾರಂಗಿ: ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ
ಕೈಲಾಶ್ ಚೌಧರಿ: ಕೃಷಿ ಮತ್ತು ರೈತರ ಕಲ್ಯಾಣ
ಸುಶ್ರಿ ದೆಬಾಶ್ರೀ ಚೌಧರಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ


ಸಂಬಂಧಿತ ಟ್ಯಾಗ್ಗಳು

PM Modi Minister Cabinet Governament


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ