ಮದುವೆ, ಮಕ್ಕಳಿಲ್ಲದಿದ್ದರೆ ಹ್ಯಾಪಿಯಾಗಿರ್ತಾಳಂತೆ ಹೆಣ್ಣು..!

Women are happier without marriage and children

31-05-2019

ಹೆಣ್ಣಿಗೆ ಮದುವೆಯಾಗದಿದ್ದರೆ ಪೋಷಕರಿಗೆ ಟೆನ್ಶನ್ನು.. ಮದುವೆಯಾಗಿ ಮಕ್ಕಳಾಗದಿದ್ದರೆ ಅದು ಮತ್ತೂ ದೊಡ್ಡ ಸಮಸ್ಯೆ.. ಇವೆಲ್ಲ ಹಳೆ ಕಾಲದಲ್ಲಾಯ್ತು. ಮದುವೆ.. ಮಕ್ಕಳು.. ಇವೆಲ್ಲಾ ಇದ್ದದಿದ್ದರೇನೇ ಹೆಣ್ಮಕ್ಕಳು ಹೆಚ್ಚು ಸಂತೋಷದಿಂದ ಇರ್ತಾರೆ ಎನ್ನುತ್ತಿದೆ ಹೊಸ ಅಧ್ಯಯನ.

ಆದರೆ ಈ ಅಧ್ಯಯನ ನಡೆದಿದ್ದು ನಮ್ಮ ದೇಶದಲ್ಲಿಯಲ್ಲ. ಬದಲಾಗಿ ಅಮೆರಿಕದಲ್ಲಿ. ಅಲ್ಲಿನ ಅಮೆರಿಕನ್ ಟೈಮ್ ಯೂಸ್ ಸರ್ವೆ ಈ ಅಧ್ಯಯನ ನಡೆಸಿದ್ದು, ಇದರಲ್ಲಿ, ಮದುವೆಯಾದವರು, ಮದುವೆಯಾಗದವರು, ಬೇರೆಯಾದವರು, ವಿಚ್ಛೇದನಕ್ಕೊಳಗಾದವರು, ವಿಧವೆಯರು ಪಾಲ್ಗೊಂಡಿದ್ದಾರೆ.

ಈ ಅಧ್ಯಯನದ ಪ್ರಕಾರ, ಮದುವೆಯಾಗಿ ಜೀವನಸಂಗಾತಿ ಹಾಗೂ ಮಕ್ಕಳನ್ನು ಪಡೆಯದ ಹೆಣ್ಣು ಮದುವೆಯಾಗಿರುವ ಹೆಣ್ಣಿಗಿಂತ ಹೆಚ್ಚು ಸಂತೋಷವಾಗಿರುತ್ತಾಳೆ ಮತ್ತು ಹೆಚ್ಚು ಆರೋಗ್ಯವಾಗಿರುತ್ತಾಳೆ ಎಂಬುದು ತಿಳಿದುಬಂದಿದೆ.

ಇದರಿಂದ ಯಾವಾಗ, ಎಲ್ಲಿ, ಯಾರನ್ನು ಮದುವೆಯಾಗಬೇಕು ಹಾಗೂ ಮದುವೆಯೇ ಬೇಡವಾ ಎಂಬ ನಿರ್ಧಾರ ಹೆಣ್ಣಿದ ಬದುಕಲ್ಲಿ ಬಹಳ ಮುಖ್ಯವಾಗುತ್ತದೆ. ಈ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಂಡಲ್ಲಿ ಆಕೆ ಹೆಚ್ಚು ಸಂತೋಷವಾಗಿರುತ್ತಾಳೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.


ಸಂಬಂಧಿತ ಟ್ಯಾಗ್ಗಳು

Women Children Marriage Happyness


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ