ಒಂದು ತಿಂಗಳು ಮಾಧ್ಯಮಗಳಿಂದ ಕಾಂಗ್ರೆಸ್ ಪ್ರತಿನಿಧಿಗಳು ದೂರ

Congress stay away from Media for a month

31-05-2019

ದೆಹಲಿ: 2019ರ ಲೋಕಸಭೆ ಚುನಾವಣೆಯಲ್ಲಿ ಭಾರೀ ಗೆಲುವಿನ ವಿಶ್ವಾಸದಲ್ಲಿದ್ದ
ಕಾಂಗ್ರೆಸ್ ಪಕ್ಷ ಕೇವಲ 52 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈ ಬೆಳವಣಿಗೆಯ
ನಂತರ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುವುದಾಗಿ ರಾಹುಲ್ ಗಾಂಧಿ
ಘೋಷಿಸಿದ್ದರು. 17ನೇ ಲೋಕಸಭೆಯಲ್ಲಿ ಕಳಪೆ ಪ್ರದರ್ಶನ ಮತ್ತು ಕಾಂಗ್ರೆಸ್
ಅಧಿಕಾರದಲ್ಲಿರುವ ಕೆಲವು ರಾಜ್ಯಗಳಲ್ಲಿ ಅಸ್ಥಿರತೆ, ಮೈತ್ರಿ ಸರ್ಕಾರ
ಅಧಿಕಾರದಲ್ಲಿರುವ ಬಿಗುವಿನ ವಾತಾವರಣ ಇತ್ಯಾದಿ ಕಾರಣಗಳು ಪಕ್ಷಕ್ಕೆ ಮುಜುಗರ ತಂದಿವೆ.
ಈ ಎಲ್ಲ ಆಂತರಿಕ ಬೆಳವಣಿಗೆ ಮತ್ತು ಮಧ್ಯಪ್ರದೇಶ, ರಾಜಸ್ಥಾನ, ಕರ್ನಾಟಕ ರಾಜ್ಯದಲ್ಲಿ
ಪ್ರಮುಖ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಈ ಅವಧಿಯಲ್ಲಿ ಪಕ್ಷದ
ಪ್ರತಿನಿಧಿಗಳನ್ನು ಸುದ್ದಿವಾಹಿನಿಗಳ ಚರ್ಚೆಗಳಲ್ಲಿ ಪಾಲ್ಗೊಳ್ಳದಂತೆ ಕಾಂಗ್ರೆಸ್
ನಿರ್ಬಂಧಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ, ಒಂದು ತಿಂಗಳ
ಕಾಲ ಕಾಂಗ್ರೆಸ್ ಪ್ರತಿನಿಧಿಗಳನ್ನು ಚರ್ಚೆಗೆ ಆಹ್ವಾನಿಸದಂತೆ ಮನವಿ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Congress Election Media Result


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ