ತಲಕಾವೇರಿಗೆ ಹೆಣ್ಣೂರ್ ಎಂ .ಎಲ್ .ಸಿ . ಭೇಟಿ

Tala Kaveri News

29-05-2019

ಚೆಟ್ಟಳ್ಳಿ: ತಲಕಾವೇರಿಗೆ ಬೆಂಗಳೂರಿನ ಹೆಣ್ಣೂರ್  ಜೆ. ಡಿ . ಎಸ್ . ಎಂ .ಎಲ್ .ಸಿ .,  ರಮೇಶ್ ಗೌಡ ಭೇಟಿ ಕೊಟ್ಟು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ದೇವಸ್ಥಾನ ಪರಿಶೀಲಿಸಿದರು. ಈ ಸಂದರ್ಭ ದೇವಸ್ಥಾನದ ತೀರ್ಥಸ್ನಾನದ ಕೊಳದ ಜಲಮೂಲವು ಬತ್ತಿಹೋದ ಬಗ್ಗೆ ಅವರ ಗಮನ ಸೆಳೆಯಲಾಯಿತು.

ಅವರು ಆ ಕೂಡಲೇ ಮುಜರಾಯಿ ಇಲಾಖೆಯ ನಿರ್ದೇಶಕರಿಗೆ ಫೋನಾಯಿಸಿ  ಕೊಳಕ್ಕೆ ಬರುವ ಜಲಮೂಲದ ಸೆಲೆಯನ್ನು ಈ ಕೂಡಲೇ ಸರಿಪಡಿಸಲು ಆಗ್ರಹಿಸಿದರು. ಅದಕ್ಕೆ ಸ್ಪಂದಿಸಿದ ನಿರ್ದೇಶಕರು ತಾನು ಇದರ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡುತ್ತೇನೆ ಎಂದು ಭರವಸೆ ಕೊಟ್ಟರು.

ಇನ್ನು, ರಮೇಶ್ ಗೌಡರು ತಾನು ಹೆಚ್ಚಿನ ಅನುದಾನ ಕೊಡಿಸಲು ಮತ್ತು ದೇವಸ್ಥಾನದ ಅಭಿವೃದ್ಧಿಯ ಬಗ್ಗೆ ಮುಖ್ಯಮಂತ್ರಿಗಳ ಜೊತೆಯಲ್ಲಿ ಸಮಾಲೋಚಿಸಲು ದೇವಸ್ಥಾನದ  ಅಧ್ಯಕ್ಷರಾದ ಬಿದ್ದಾಟಂಡ ತಮ್ಮಯನವರನ್ನು  ಬೆಂಗಳೂರಿಗೆ ಆಗಮಿಸುವಂತೆ ಕೋರಿದರು. ಇದೇ ವೇಳೆ ಭಾಗಮಂಡಲ ಮತ್ತು ತಲಕಾವೇರಿ ಸುತ್ತಮುತ್ತಲ ರಸ್ತೆ ಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.


ಸಂಬಂಧಿತ ಟ್ಯಾಗ್ಗಳು

Tala Kaveri River Kodagu Temple


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ