ತಲಕಾವೇರಿಯಲ್ಲಿ ದೃಢ ಕಳಶ ಪೂಜೆ

Tala Kaveri News

29-05-2019

ಚೆಟ್ಟಳ್ಳಿ; ತಲಕಾವೇರಿ ದೈವ ಸನ್ನಿದಿಯಲ್ಲಿ ಹನ್ನೆರಡು  ವರ್ಷಕೊಮ್ಮೆ ನಡೆಯುವ ಬ್ರಹ್ಮಕಲಶೋತ್ಸವವು ನಡೆಯಿತು. ಬ್ರಹ್ಮಕಲಶೋತ್ಸವ ನಡೆದ ೪೮ ದಿವಸದಲ್ಲಿ ನಿಯಮದಂತೆ ನಡೆಯಬೇಕಾಗಿದ್ದ ದೃಢ ಕಳಶ ಪೂಜೆಯು ತಲಕಾವೇರಿಯ ಅಗಸ್ತೇಶ್ವರ ಸನ್ನಿದಿಯಲ್ಲಿ ಕ್ಷೇತ್ರ ತಂತ್ರಿಗಳಾದ  ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ  ವಿಜೃಂಭಣೆಯಿಂದ ನಡೆಯಿತು.

ಪೂಜೆಯಲ್ಲಿ  ಮಣವಟ್ಟೀರಾ ಮತ್ತು ಪಟ್ಟಮಾಡ ಕುಟುಂಬಸ್ಥರು, ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಿದ್ದಾಟಂಡ ತಮ್ಮಯ , ಸದಸ್ಯರುಗಳಾದ ಉದಿಯಾಂಡ ಸುಭಾಷ್ , ಕೆದಂಬಾಡಿ ರಮೇಶ್,  ನಿಡ್ಯಮಲೆ ಮೀನಾಕ್ಷಿ ,  ಕ್ಷೇತ್ರ ತಕ್ಕರಾದ ಮತ್ತು ಸದಸ್ಯರಾದ ಕೊಡಿ ಮೋಟಯ್ಯ , ಕಾರ್ಯಕಾರಿ ಮಂಡಳಿಯ ಕಾರ್ಯನಿರ್ವಹಣಾ ಅಧಿಕಾರಿಯಾದ ಜಗದೀಶ್ , ದೇವಸ್ಥಾನದ ಪಾರುಪತ್ಯಗಾರರಾದ ಕೊಂಡಿರ ಪೊನ್ನಣ್ಣ , ರಾಜೇಶ್ ಆಚಾರ್,  ಪುತ್ತರಿರ ಪಪ್ಪು ತಿಮ್ಮಯ, ಮತ್ತು ದೇವಸ್ಥಾನದ ಅರ್ಚಕ ವೃಂದದವರು ಪಾಲ್ಗೊಂಡಿದ್ದರು. 


ಸಂಬಂಧಿತ ಟ್ಯಾಗ್ಗಳು

Tala Kaveri River Kodagu Temple


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ