ಇಬ್ಬರು ಮಕ್ಕಳಿದ್ದವರಿಗೆ ಮಾತ್ರ ಸರ್ಕಾರಿ ಉದ್ಯೋಗ: ಕೇಂದ್ರಕ್ಕೆ ಹೈ ನೊಟೀಸ್

Delhi High Court issued Notice to Centre

29-05-2019

ದೆಹಲಿ: ಇಬ್ಬರು ಮಕ್ಕಳನ್ನು ಹೊಂದಿದವರಿಗೆ ಮಾತ್ರ ಸರ್ಕಾರಿ ಉದ್ಯೋಗ, ಪ್ರೋತ್ಸಾಹಧನ ಮತ್ತು ಸಹಾಯಧನ ಎಂಬ ನಿಯಮದ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೊಟೀಸ್ ನೀಡಿದೆ. ಜನಸಂ‍ಖ್ಯೆಯ ನಿಯಂತ್ರಣಕ್ಕಾಗಿ ಮೇಲಿನ ನಿಯಮಾವಳಿಗಳನ್ನು ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ದೂರುದಾರರು ಕೋರ್ಟ್ ಮುಂದೆ ವಾದ ಮಂಡಿಸಿದರು. ಈ ವೇಳೆ ಕೋರ್ಟ್ ನೊಟೀಸ್ ನೀಡಿದೆ. ಈ ಸಂಬಂಧ ಸಮಿತಿ ನೀಡಿರುವ ಶಿಫಾರಸುಗಳ ಕುರಿತು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ ಎಂಬುದರ ಕುರಿತು ಪ್ರತಿಕ್ರಿಯಿಸಿ ಎಂದು ಕೂಡ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.


ಸಂಬಂಧಿತ ಟ್ಯಾಗ್ಗಳು

High Court Job Governament Population


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ