ತಕ್ಷಣ ತೂಕ ಇಳಿಸಿಕೊಳ್ಳಲು ಈ ಜ್ಯೂಸ್ ಕುಡಿಯಿರಿ

Fat Burning Juices You Must Have for Quick Weight Loss

29-05-2019

ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಕುಳಿತು ಕೆಲಸ ಮಾಡುವ ಬಹುತೇಕ ಎಲ್ಲರಲ್ಲೂ ಸ್ಥೂಲಕಾಯದ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಎಲ್ಲರೂ ತೂಕ ಇಳಿಸಿಕೊಳ್ಳುವುದು ಹೇಗೆ ಅನ್ನೋ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ.

ಹಾಗಿದ್ರೆ ಕಡಿಮೆ ಕ್ಯಾಲೋರಿಗಳಿರುವ ಈ ಆರೋಗ್ಯಕರವಾದ ಜ್ಯೂಸ್ ಗಳನ್ನು ಕುಡಿದರೆ ತೂಕ ಇಳಿಕೆಯಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.

ಕಡಿಮೆ ಕ್ಯಾಲೋರಿ ಇರುವ ಕ್ಯಾರೆಟ್ ಜ್ಯೂಸ್ ಕುಡಿದರೆ ತೂಕ ಇಳಿಕೆಯಾಗುತ್ತದೆ.

ಹಾಗಲಕಾಯಿ ಜ್ಯೂಸ್ ನಲ್ಲಿ ಅತ್ಯಂತ ಕಡಿಮೆ ಕ್ಯಾಲೋರಿಗಳಿದ್ದು ಇದೂ ಸ್ಥೂಲಕಾಯ ಕಡಿಮೆ ಮಾಡುತ್ತದೆ.

ಸೌತೆಕಾಯಿ ಜ್ಯೂಸ್ ನಲ್ಲೂ ಕಡಿಮೆ ಕ್ಯಾಲೋರಿಗಳಿದ್ದು ತೂಕ ಇಳಿಕೆಗೆ ನೆರವಾಗುತ್ತದೆ.

ಜೀರ್ಣಕ್ರಿಯೆಗೆ ಸಹಾಯ ಮಾಡುವ ನೆಲ್ಲಿಕಾಯಿ ಜ್ಯೂಸ್ ಕುಡಿದರೂ ನೀವು ಸಣ್ಣಗಾಗಬಹುದು.

ಹೆಚ್ಚಿನ ಪ್ರಮಾಣದಲ್ಲಿ ಆ್ಯಂಟಿ ಆಕ್ಸಿಡಂಟ್ ಇರುವ ದಾಳಿಂಬೆ ಜ್ಯೂಸ್ ಕುಡಿದರೆ ನೀವು ತೂಕ ಇಳಿಸಿಕೊಳ್ಳಬಹುದು.

ಕ್ಯಾಬೇಜ್ ಜ್ಯೂಸ್ ನಿಮ್ಮ ಜೀರ್ಣಕ್ರಿಯೆ ಉತ್ತಮಗೊಳಿಸಿ ಕೊಬ್ಬನ್ನು ಹೊರಹಾಕುತ್ತದೆ.

ಕಲ್ಲಂಗಡಿ ಜ್ಯೂಸ್ ನಲ್ಲಿ ಅತ್ಯಂತ ಕಡಿಮೆ ಕ್ಯಾಲರಿ ಇರುವುದರಿಂದ ಇದು ತೂಕ ಇಳಿಕೆಗೆ ಅತ್ಯುತ್ತಮ.

ಆರೆಂಜ್ ಜ್ಯೂಸ್ ನಲ್ಲಿಯೂ ಕಡಿಮೆ ಕ್ಯಾಲರಿ ಇದ್ದು, ತೂಕ ಇಳಿಕೆಗೆ ಸಹಾಯವಾಗುತ್ತದೆ.

ಅನಾನಸ್ ಜ್ಯೂಸ್ ಕೂಡ ತೂಕ ಇಳಿಕೆಗೆ ಉತ್ತಮ.


ಸಂಬಂಧಿತ ಟ್ಯಾಗ್ಗಳು

Carrot Fat Weight Loss Juice


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ