ನೆಹರೂ, ರಾಜೀವ್ ನಂತರ ಮೋದಿ ವರ್ಚಸ್ಸಿರುವ ನಾಯಕ: ರಜಿನಿ

Rajinikanth’s statement on modi

28-05-2019

ಚೆನ್ನೈ: ಇದು ಮೋದಿಯವರ ಗೆಲುವು ಎಂದು ನಟ ಮತ್ತು ರಾಜಕಾರಣಿ ರಜಿನಿಕಾಂತ್ ಹೇಳಿದರು. 2019ರ ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಅವರು, ಭಾರತದಲ್ಲಿ ಜವಾಹರ್ ಲಾಲ್ ನೆಹರು ಮತ್ತು ರಾಜೀವ್ ಗಾಂಧಿಯವರ ನಂತರ ಮೋದಿಯವರು ವರ್ಚಸ್ಸು ಇರುವ ನಾಯಕ. ಮೋದಿಯವರ ಪ್ರಮಾಣವಚನ ಸಮಾರಂಭಕ್ಕೆ ನಾನು ಕೂಡ ತೆರಳುತ್ತಿದ್ದೇನೆ ಎಂದರು. ಜೊತೆಗೆ, ರಾಹುಲ್ ಗಾಂಧಿಯವರು ಪಕ್ಷದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಬಾರದು. ಅವರಿಂದ ಸಾಧ್ಯ ಎಂಬ ಸಂಗತಿಯನ್ನು ಸಾಧಿಸಿ ತೋರಿಸಬೇಕು. ಪ್ರಜಾಪ್ರಭುತ್ವದಲ್ಲಿ ವಿಪಕ್ಷಗಳು ಕೂಡ ಬಲಿಷ್ಠವಾಗಿರಬೇಕು ಎಂದು ಅವರು ಹೇಳಿದರು.


ಸಂಬಂಧಿತ ಟ್ಯಾಗ್ಗಳು

Rajinikanth Oath Narendra Modi Nehru


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ